ನನ್ನ ಟ್ರೋಲ್‌ ನೋಡಿ ಲವರ್‌ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದ- Sonu Srinivas Gowda ಕಣ್ಣೀರು

ನನ್ನ ಟ್ರೋಲ್‌ ನೋಡಿ ಲವರ್‌ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದ- Sonu Srinivas Gowda ಕಣ್ಣೀರು

ʻಬಿಗ್‌ ಬಾಸ್‌ ಕನ್ನಡ ಒಟಿಟಿ 1’ರ ಸ್ಪರ್ಧಿ ಸೋನು ಶ್ರೀನಿವಾಸ್‌ ಗೌಡ (Sonu Srinivas Gowda) ಅವರು ಟ್ರೋಲ್‌ಗಳಿಂದ ಲವರ್‌ ಕೊಟ್ಟ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಮಾನಸಿಕ ಕಿರುಕುಳ ಬಗ್ಗೆ ಮೌನ ಮುರಿದಿದ್ದಾರೆ.

ಇನ್ಸ್ಟಾಗ್ರಾಂ ಖಾತೆಯಲ್ಲಿ ತನ್ನ ಬದುಕಿನ ಕಥೆ, ಬ್ರೇಕಪ್‌ ಬಗ್ಗೆ ಸೋನು ಮಾತನಾಡಿ, ಈ ಟ್ರೋಲ್‌ಗಳೆನ್ನೆಲ್ಲಾ ನೋಡಿ, ನನ್ನ ಲವ್‌ನಲ್ಲೂ ಜಗಳ ಸ್ಟಾರ್ಟ್ ಆಯಿತು. ಜೊತೆಗೆ ನಮ್ಮ ಕುಟುಂಬದಲ್ಲೂ ತುಂಬಾ ಜಗಳ ಸ್ಟಾರ್ಟ್ ಆಯ್ತು. ನಮ್ಮ ಅಮ್ಮ ಅಂತೂ ನನ್ನ ಜೊತೆ 6 ತಿಂಗಳ ಕಾಲ ಒಂದೂ ಮಾತನಾಡಿರಲಿಲ್ಲ. ಆಗ ನಾನಿನ್ನೂ ಚಿಕ್ಕ ಹುಡುಗಿ ಅಲ್ವಾ, ಪರವಾಗಿಲ್ಲ ಬಿಡು ಮಾತಾಡ್ಲಿಲ್ಲ ಅಂದ್ರೆ ಏನು ಅಂತಾ ಸುಮ್ಮನಿದ್ದೆ. ಬಟ್ ನನ್ನ ಲವ್ ಅಂತೂ ಹದಗೆಟ್ಟು ಹೋಗಿತ್ತು. ನನ್ನ ತಮ್ಮ ಸಾಗರ. ಸಿಕ್ಕಾಪಟ್ಟೆ ಸಪೋರ್ಟ್ ಮಾಡ್ತಿದ್ದ ಎಲ್ಲದಕ್ಕೂ. ನೀನು ಮಾಡೇ ಮಾಡ್ತೀಯ ಏನಾದ್ರೂನೂ, ಏನಾದ್ರೂ ಮಾಡು ಎಂದು ಹೇಳುತ್ತಿದ್ದನು. ಓಕೆ ಅಂತಾ ಹೇಳಿ ನಾನು ನನ್ನ ಜರ್ನಿ ಸ್ಟಾರ್ಟ್ ಮಾಡಿದೆ.

 

View this post on Instagram

 

A post shared by @sonusrinivas.gowda54

ನನ್ನ ಲವ್‌ನಲ್ಲಿ ನೊಂದು ಬೆಂದಿದ್ದೇನೆ. ಈಗ ನಿಜವಾದ ಜೀವನ ಶುರುವಾಗಿದೆ ಎಂದಿದ್ದಾರೆ. ದಿನವೂ ನೆಗೆಟಿವ್‌, ಚುಚ್ಚಿ ಚುಚ್ಚಿ ಮಾತನಾಡೋದು ಮಾಡ್ತಿದ್ದ. ಒಂದು ಹುಡುಗನ ಜೊತೆ ಮಾತನಾಡೋ ಹಾಗಿರಲಿಲ್ಲ. ನನ್ನ ಬಗ್ಗೆ ಎಲ್ಲಾ ಗೊತ್ತಿದ್ರೂ, ನೆಗೆಟಿವ್‌ ಆಗಿ ಮಾತನಾಡುತ್ತಿದ್ದ, ಎಲ್ಲವೂ ಸಹಿಸಿಕೊಂಡು ಸಾಕಾಗಿತ್ತು. ಆಮೇಲೆ ಅವರೊಂದಿಗೆ ಬ್ರೇಕಪ್‌ ಮಾಡಿಕೊಂಡೆ. ಮತ್ತೆ ಪ್ಯಾಚಪ್‌ ಆಯ್ತು. ಸಾಕಷ್ಟು ರಗಳೆಗಳನ್ನು ಅನುಭವಿಸಿದೆ ಎಂದು ಸೋನು ಹೇಳಿಕೊಂಡಿದ್ದಾರೆ.

ಸೋನು ಈ ಹಿಂದೆ ವೈಯಕ್ತಿಕ ಬದುಕಿನ ಸಾಕಷ್ಟು ವಿಚಾರಗಳಿಗೆ ಟ್ರೋಲ್‌ ಆಗಿದ್ದಾರೆ.

News Desk Sandalwood Times

error: Content is protected !!