Cannes Film Festival: ಕೆವಿಎನ್ ನಿರ್ಮಾಣದ ‘ಬಾಲನ್ ದಿ ಬಾಯ್ಸ್’ ಸಿನಿಮಾ ಪ್ರದರ್ಶನ
ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು ಕೆವಿಎನ್. ಈ ಪ್ರೊಡಕ್ಷನ್ ಸೃಷ್ಟಿಕರ್ತ ವೆಂಕಟ್ ಕೆ ನಾರಾಯಣ್ (Venkat K Narayan) ನೂರಾರು ಕೋಟಿ ಸುರಿದು ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಸದ್ಯ KVN ನಿರ್ಮಿಸಿರುವ ಕೆಡಿ ಚಿತ್ರ ಸೂಪರ್ ಹಿಟ್ ಆಗಿದೆ. ಇದೀಗ ಈ ಖುಷಿ ನಡುವೆ ಕೆವಿಎನ್ ಸಂಸ್ಥೆ ಮತ್ತೊಂದು ಮಹತ್ತರ ಹೆಜ್ಜೆಯೊಂದನ್ನು ಇಟ್ಟಿದೆ.

ಕೆವಿಎನ್ ಕನ್ನಡ, ತೆಲುವು ಹಾಗೂ ತಮಿಳು ಚಿತ್ರಗಳನ್ನು ನಿರ್ಮಿಸುತ್ತಿದೆ. ಜೊತೆಗೆ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ. ಈ ಸಂಸ್ಥೆ ಬಾಲನ್ ದಿ ಬಾಯ್ ಎಂಬ ಮಲಯಾಳಂ ಸಿನಿಮಾಗೆ ಹಣ ಹಾಕಿದೆ. ಈ ಚಿತ್ರವನ್ನು ಇದೀಗ ವಿಶ್ವ ವೇದಿಕೆಗೆ ಕೊಂಡೊಯ್ಯುತ್ತಿದೆ.

ಕೆವಿಎನ್ ನಡಿ ನಿರ್ಮಾಣಗೊಂಡಿರುವ ‘ಬಾಲನ್ ದಿ ಬಾಯ್ಸ್’ (Balan The Boys) ಚಿತ್ರ ಕಾನ್ಸ್ ಪ್ರದರ್ಶನಗೊಳ್ಳಲಿದೆ. ಹೌದು
ಅತ್ಯಂತ ಪ್ರತಿಷ್ಠಿತ ಚಿತ್ರೋತ್ಸವ ಎಂದು ಪರಿಗಣಿಸಲಾಗಿರುವ ಕಾನ್ಸ್ ಸಿನಿಮೋತ್ಸವದಲ್ಲಿ ಬಾಲನ್ ದಿ ಬಾಯ್ಸ್ ಪ್ರದರ್ಶನಗೊಳ್ಳಲಿದೆ.
ಇದೇ ತಿಂಗಳ 14ರಂದು ನಡೆಯುವ ಕಾನ್ಸ್ ಚಲನಚಿತ್ರೋತ್ಸವದಲ್ಲಿ ದೇಶ ವಿದೇಶಗಳ ಕಲಾವಿದರು ಭಾಗವಹಿಸಲಿದ್ದಾರೆ. ಈ ಸಿನಿಮೋತ್ಸವದಲ್ಲಿ ಕೆವಿಎನ್ ಹಣ ಹಾಕಿರುವ ಬಾಲನ್ ದಿ ಬಾಯ್ ಪ್ರದರ್ಶನಗೊಳ್ಳಲಿದೆ. ಈ ಹಿಂದೆ ‘ಮಂಜುಮ್ಮೆಲ್ ಬಾಯ್ಸ್’ ಚಿತ್ರ ನಿರ್ದೇಶನ ಮಾಡಿದ್ದ ಚಿದಂಬರಂ ಬಾಲನ್ ದಿ ಬಾಯ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

