ಸಾಮಾಜಿಕ ಸಂದೇಶ ಸಾರುವ ‘ಧೃತಿ’ ಚಿತ್ರ ರಿಲೀಸ್‌ಗೆ ರೆಡಿ

ಸಾಮಾಜಿಕ ಸಂದೇಶ ಸಾರುವ ‘ಧೃತಿ’ ಚಿತ್ರ ರಿಲೀಸ್‌ಗೆ ರೆಡಿ

ಸಾಮಾಜಿಕ ಸಂದೇಶ ಸಾರುವ ‘ಧೃತಿ’ ಚಿತ್ರ (Dhruti) ರಿಲೀಸ್‌ಗೆ ಸಜ್ಜಾಗಿದೆ. ಮೂಲತಃ ಉದ್ಯಮಿಯಾಗಿರುವ ಜಗದೀಶ್ ಎಂ ಮೊದಲ ಬಾರಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಛಾಯಾಗ್ರಹಣ ಮಾಡಿ ನಿರ್ದೇಶಿಸಿರುವ ಹಾಗೂ ನಿರ್ಮಾಣವನ್ನು ಮಾಡಿರುವ ʻಧೃತಿʼ ಚಿತ್ರ ಈ ವಾರ (ಮೇ 8) ರಂದು ತೆರೆಗೆ ಬರುತ್ತಿದೆ. ಗೀತಾ ದಾಮೋದರನ್ ಈ ಚಿತ್ರದ ಸಹ ನಿರ್ಮಾಪಕರು.

ಶೋಷಣೆಗೆ ಒಳಗಾದ ಹೆಣ್ಣಮಗಳೊಬ್ಬಳ ಸುತ್ತ ʻಧೃತಿʼ ಚಿತ್ರದ ಕಥೆ ಸಾಗುತ್ತದೆ. ಆದರೆ ನಾವು ಈ ಚಿತ್ರದಲ್ಲಿ ಶೋಷಣೆಯನ್ನು ವಿಜೃಂಭಿಸಿಲ್ಲ. ಸಮಸ್ಯೆಗೆ ಪರಿಹಾರವನ್ನು ಹೇಳಿದ್ದೇವೆ‌. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಲಿದೆ ಎನ್ನುತ್ತಾರೆ ನಿರ್ದೇಶಕ ಜಗದೀಶ್.

ಪ್ರಸನ್ನ ಕುಮಾರ್ ಸಂಗೀತ ನಿರ್ದೇಶನ ಹಾಗೂ ಶಶಾಂಕ್ ಮುರಳಿಧರನ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಆಂಚಲ್ ಗೌಡ, ಪ್ರಶಾಂತ್ ಸೊಪ್ಪಿಮಠ, ಭಾವನಾ ರೆಡ್ಡಿ, ಮನೋಜ್ ಕುಮಾರ್, ಧನುಷ್, ಪ್ರದೀಪ್, ದೀಪಕ್, ಮಧು ಮಂದಗೆರೆ ಮುಂತಾದವರಿದ್ದಾರೆ.

News Desk Sandalwood Times

error: Content is protected !!