ರಿಷಿ, ಪ್ರಕಾಶ್ ಬೆಳವಾಡಿ ಜುಗಲ್‌ಬಂದಿ- ‘ಅನಂತ ಪದ್ಮನಾಭ್’ ಚಿತ್ರದ ಪೋಸ್ಟರ್ ಔಟ್

ರಿಷಿ, ಪ್ರಕಾಶ್ ಬೆಳವಾಡಿ ಜುಗಲ್‌ಬಂದಿ- ‘ಅನಂತ ಪದ್ಮನಾಭ್’ ಚಿತ್ರದ ಪೋಸ್ಟರ್ ಔಟ್

ದಾ ಹೊಸ ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರೋ ರಿಷಿ (Rishi) ಈಗ ಪ್ರಕಾಶ್ ಬೆಳವಾಡಿ (Prakash Belavadi) ಜೊತೆಗೂಡಿ ‘ಅನಂತ ಪದ್ಮನಾಭ’ನ (Ananta Padmanabha) ಕಥೆ ಹೇಳೋಕೆ ಸಜ್ಜಾಗಿದ್ದಾರೆ.

ಸಂಭಾಷಣೆಕಾರ ಪ್ರಶಾಂತ್ ರಾಚಪ್ಪ ಅವರು ನಿರ್ದೇಶನ ಮಾಡ್ತಿರುವ ‘ಅನಂತ ಪದ್ಮನಾಭ್’ ಚಿತ್ರದಲ್ಲಿ ರಿಷಿ ಮತ್ತು ಪ್ರಕಾಶ್ ಬೆಳವಾಡಿ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಕಾಮಿಡಿ ಡ್ರಾಮಾ ಇರೋ ಈ ಚಿತ್ರವನ್ನು ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದಾರೆ.

 

View this post on Instagram

 

A post shared by Rishi Nagaraju (@rishi_actor)

ಸದ್ಯ ಟೈಟಲ್ ಮತ್ತು ಫಸ್ಟ್ ಲುಕ್‌ನಿಂದ ಹೈಪ್ ಕ್ರಿಯೇಟ್ ಮಾಡ್ತಿರೋ ‘ಅನಂತ ಪದ್ಮನಾಭ್’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಎರಡು ಹಾಡುಗಳ ಶೂಟಿಂಗ್ ಬಾಕಿಯಿದೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಮತ್ತು ತಾರಾ ಬಳಗದ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.

ಇನ್ನೂ ಅಧ್ಯಕ್ಷ, ವಿಕ್ಟರಿ, ತೀರ್ಥರೂಪ ತಂದೆಯವರಿಗೆ, ರನ್ನ, ಪೊಗರು, ಅಣ್ಣ ಇನ್ ಮೆಕ್ಸಿಕೋ ಚಿತ್ರಗಳಿಗೆ ಪ್ರಶಾಂತ್ ರಾಚಪ್ಪ ಅವರು ಸಂಭಾಷಣೆ ಬರೆದಿದ್ದಾರೆ. ‘ಅನಂತ ಪದ್ಮನಾಭ್’ ಚಿತ್ರದ ಮೂಲಕ ಪ್ರಶಾಂತ್ ಮೊದಲ ಬಾರಿಗೆ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ.

News Desk Sandalwood Times

error: Content is protected !!