ಯಶ್ ‘ಟಾಕ್ಸಿಕ್’ನಲ್ಲಿ ರುಕ್ಮಿಣಿ ವಸಂತ್ ಪಾತ್ರ ಹೇಗಿದೆ?- ರಿವೀಲ್ ಮಾಡಿದ ನಟಿ

ಯಶ್ ‘ಟಾಕ್ಸಿಕ್’ನಲ್ಲಿ ರುಕ್ಮಿಣಿ ವಸಂತ್ ಪಾತ್ರ ಹೇಗಿದೆ?- ರಿವೀಲ್ ಮಾಡಿದ ನಟಿ

‘ಕಾಂತಾರ ಚಾಪ್ಟರ್ 1′ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚ್ತಿರುವ ರುಕ್ಮಿಣಿ ವಸಂತ್ (Rukmini Vasanth) ಅವರು ಇದೀಗ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿನ ಪಾತ್ರದ ಮೂಲಕ ನಟಿ ಭಾರೀ ಸದ್ದು ಮಾಡ್ತಿದ್ದಾರೆ. ಮೊದಲ ಬಾರಿಗೆ ಯಶ್ (Yash) ನಟನೆಯ ಚಿತ್ರದ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ರುಕ್ಮಿಣಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ನನ್ನ ಕಾಂತಾರ ಸಿನಿಮಾಗೆ ತುಂಬಾ ಪ್ರೀತಿ ಕೊಟ್ಟಿದ್ದೀರಿ, ಎಲ್ಲರಿಗೂ ಥ್ಯಾಂಕ್ಯೂ. ಇನ್ನೂ ‘ಟಾಕ್ಸಿಕ್’ ಚಿತ್ರದ ಬಗ್ಗೆ ಪ್ರಮೋಷನ್ ಟೈಮ್‌ನಲ್ಲಿ ಮಾತನಾಡುತ್ತೇನೆ. ಚಿತ್ರ ಸೂಪರ್ ಆಗಿ ಬಂದಿದೆ. ಮಾರ್ಚ್ 19ರಂದು ‘ಟಾಕ್ಸಿಕ್’ ರಿಲೀಸ್ ಆಗುತ್ತೆ, ಸಿನಿಮಾ ನೋಡಿ ಬೆಂಬಲಿಸಿ ಎಂದಿದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿ (Toxic) ಮೆಲಿಸಾ ಎಂಬ ಬೋಲ್ಡ್ ಪಾತ್ರಕ್ಕೆ ನಟಿ ಬಣ್ಣ ಹಚ್ಚಿದ್ದಾರೆ. ಸದಾ ಟ್ರೆಡಿಷನಲ್ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದ ನಟಿ ಮೊದಲ ಬಾರಿಗೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಜೊತೆ ರುಕ್ಕು ರೋಲ್ ಹೇಗಿದೆ ಎಂದು ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

ಮಲಯಾಳಂ ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದು, ಯಶ್ ಜೊತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ, ತಾರಾ ಸುತಾರಿಯಾ ಸೇರಿದಂತೆ ಅನೇಕರು ನಟಿಸಿದ್ದಾರೆ.

News Desk Sandalwood Times

Related articles

error: Content is protected !!