ಪ್ರತಿಮಾ ಠಾಕೂರ್ ಜೊತೆಗಿನ ಲವ್ ಗಾಸಿಪ್ ಬಗ್ಗೆ ಕ್ಲ್ಯಾರಿಟಿ ಕೊಟ್ರು ರೋಹನ್ ರಾಜ್
ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ್ದ ರೋಹನ್ ರಾಜ್ ಇದೀಗ ಕಿರುತೆರೆಯ ʻಕೃಷ್ಣವಂಶಿʼ ಸೀರಿಯಲ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ʻಮುದ್ದು ಸೊಸೆʼ ನಟಿ ಪ್ರತಿಮಾ ಠಾಕೂರ್ (Prathima Thakur) ಜೊತೆಗಿನ ಲವ್ ರಿಲೇಷನ್ಶಿಪ್ ಬಗ್ಗೆ ಮಾತನಾಡಿದ್ದಾರೆ.

ಪ್ರತಿಮಾ ಜೊತೆಗಿನ ಲವ್ ಗಾಸಿಪ್ ಬಗ್ಗೆ ರೋಹನ್ ರಾಜ್ (Rohan Raj) ಮಾತನಾಡಿ, ಹೌದು.. ಈ ಬಗ್ಗೆ ಎಲ್ಲರಿಗೂ ಡೌಟ್ ಇದೆ, ನಾನು ಹಲವಾರು ಬಾರಿ ಕ್ಲ್ಯಾರಿಟಿ ಕೊಟ್ಟಿದ್ದೇನೆ. ನಾವಿಬ್ಬರು ಒಳ್ಳೆಯ ಫ್ರೆಂಡ್ಸ್, ಅದು ಬಿಟ್ಟು ನಮ್ಮ ನಡುವೆ ಏನಿಲ್ಲ. ಅದಕ್ಕೆ ಈ ನಡುವೆ ಜೊತೆಯಾಗಿ ನಾವು ರೀಲ್ಸ್ ಮಾಡೋದನ್ನು ಕಮ್ಮಿ ಮಾಡಿದ್ದೇವೆ. ನಾವು ಫ್ರೆಂಡ್ಸ್ ಅಷ್ಟೇ, ವ್ಲಾಗ್ನಲ್ಲೂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ.
ನಟಿ ಪ್ರತಿಮಾ ಅವರೇ ರೋಹನ್ ಚಾನ್ಸ್ ಕೊಡಿಸಿದ್ರು ಎಂಬ ವದಂತಿಗೆ ನಟ ಕ್ಲ್ಯಾರಿಟಿ ಕೊಟ್ಟಿದ್ದು, ಪ್ರತಿಮಾ ರೆಫರ್ ಮಾಡಿಲ್ಲ. ಟ್ಯಾಲೆಂಟ್ ಇಲ್ಲದಿದ್ರೆ ಯಾರೂ ಅವಕಾಶ ಕೊಡಲ್ಲ.ಸುಮ್ಮನೆ ಪ್ರೊಡ್ಯೂಸರ್ ದುಡ್ಡು ವೇಸ್ಟ್ ಮಾಡಿಕೊಳ್ಳಲ್ಲ. ರೀಲ್ಸ್ ಮಾಡಿದ್ರೆ ಸೀರಿಯಲ್ ಅವಕಾಶ ಸಿಗುತ್ತೆ ಅನ್ನೋದು ಸುಳ್ಳು. ಟ್ಯಾಲೆಂಟ್ ಇದ್ರೆ ಮಾತ್ರ ಅವಕಾಶ ಸಿಗುತ್ತೆ. ಸಾಕಷ್ಟು ಆಡಿಷನ್ ಕೊಟ್ಟಿದ್ದೇನೆ. ಆಡಿಷನ್ ಮೂಲಕ ಈ ಸೀರಿಯಲ್ಗೆ ಸೆಲೆಕ್ಟ್ ಆಗಿರೋದಾಗಿ ತಿಳಿಸಿದ್ದಾರೆ.

