ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇರುಮುಡಿ ಹೊತ್ತು ಸಾಗಿದ ಶಿವಣ್ಣ ದಂಪತಿ

ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇರುಮುಡಿ ಹೊತ್ತು ಸಾಗಿದ ಶಿವಣ್ಣ ದಂಪತಿ

ನಟ ಶಿವರಾಜ್‌ಕುಮಾರ್ (Shivarajkumar) ಮತ್ತು ಗೀತಾ (Geetha) ದಂಪತಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇಂದು (ಜ.14) ಇರುಮುಡಿ ಹೊತ್ತು ಸಾಗಿದ್ದಾರೆ. ಈ ವೇಳೆ, ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶ್ರೀಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಶಿವಣ್ಣ ಇರುಮುಡಿ ಹೊತ್ತು ಸಾಗಿದ್ದಾರೆ. ಈ ವೇಳೆ, ಪತ್ನಿ ಗೀತಾ ಸಾಥ್ ನೀಡಿದ್ದಾರೆ. ಬೆಜ್ಜವಳ್ಳಿ ಅಯ್ಯಪ್ಪನ ಉತ್ಸವದ ಹಿನ್ನೆಲೆಯಲ್ಲಿ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಅಂದಹಾಗೆ, ಉತ್ತರಕಾಂಡ, ಜೈಲರ್‌ 2, ಎ ಫಾರ್‌ ಆನಂದ್‌, ಆಪರೇಷನ್‌ ಡ್ರೀಮ್‌ ಥಿಯೇಟರ್‌ ಸೇರಿದಂತೆ ಹಲವು ಚಿತ್ರಗಳಿವೆ.

News Desk Sandalwood Times

error: Content is protected !!