ಹಳದಿ ಶಾಸ್ತ್ರದ ಸಂಭ್ರಮದಲ್ಲಿ ʼಮ್ಯಾಕ್ಸ್’ ಮಂಜು

ಹಳದಿ ಶಾಸ್ತ್ರದ ಸಂಭ್ರಮದಲ್ಲಿ ʼಮ್ಯಾಕ್ಸ್’ ಮಂಜು

ಸ್ಯಾಂಡಲ್‌ವುಡ್ ನಟ ಉಗ್ರಂ ಮಂಜು (Ugramm Manju) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೆಳತಿ ಸಂಧ್ಯಾ ಜೊತೆ ಮದುವೆಗೆ (Wedding) ಸಜ್ಜಾಗಿದ್ದಾರೆ. ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಉಗ್ರಂ ಮಂಜು ಹಳದಿ ಶಾಸ್ತ್ರ ನೆರವೇರಿದೆ. ಕುಟುಂಬದ ಜೊತೆ ಮದುವೆ ಸಂಭ್ರಮದಲ್ಲಿರೋ ಸುಂದರ ಕ್ಷಣಗಳನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜ.23ರಂದು ಧರ್ಮಸ್ಥಳದಲ್ಲಿ ಸಂಧ್ಯಾ ಜೊತೆ ಉಗ್ರಂ ಮಂಜು ಹಸೆಮಣೆ ಏರುತ್ತಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಆ ನಂತರ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನೆರವೇರಲಿದೆ. ಖ್ಯಾತ ನಟ- ನಟಿಯರಿಗೆ ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕಳೆದ ವರ್ಷ ʻಬಿಗ್ ಬಾಸ್ ಕನ್ನಡ 11’ರಲ್ಲಿ ಮಂಜು ಸ್ಪರ್ಧಿಯಾಗಿ ಅಭಿಮಾನಿಗಳ ಮನಗೆದ್ದಿದ್ದರು. ಆ ನಂತರ ಸಂಧ್ಯಾ (Sandhya) ಜೊತೆ ನಿಶ್ಚಿತಾರ್ಥ ಸರಳವಾಗಿ ಜರುಗಿತ್ತು.

News Desk Sandalwood Times

error: Content is protected !!