Toxic ಮತ್ತೆ ಮುಂದಕ್ಕೆ- ತಾಳ್ಮೆಯಿಂದ ಇರಿ, ಹೆಮ್ಮೆಪಡುವಂತಹ ಚಿತ್ರ ನೀಡುತ್ತೇವೆ ಎಂದ Yash
ರಾಕಿಂಗ್ ಸ್ಟಾರ್ ಯಶ್ (Yash) ಫ್ಯಾನ್ಸ್‌ಗೆ ಇದು ಬ್ಯಾಡ್ ನ್ಯೂಸ್. ಜೂನ್ 4ರಂದು ರಿಲೀಸ್ ಆಗಬೇಕಿದ್ದ ಟಾಕ್ಸಿಕ್ ಚಿತ್ರ ಮತ್ತೆ ಮುಂದಕ್ಕೆ ಹೋಗಿದೆ. ಚಿತ್ರ ಮುಂದಕ್ಕೆ ಹೋಗಲು ಅಸಲಿ ಕಾರಣವೇನು? ಎಂಬುದನ್ನು ಯಶ್ ಪ್ರತಿಕ್ರಿಯೆ ನೀಡಿದ್ದಾರೆ.

‘ಟಾಕ್ಸಿಕ್’ (Toxic) ನನ್ನ ಪಾಲಿಗೆ ವಿಶೇಷ ಪಯಣ. ಸಿನೆಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಉತ್ತಮ ಪ್ರತಿಕ್ರಿಯೆ, ಈ ಚಿತ್ರವು ವಿಶ್ವದಾದ್ಯಂತ ಈ ಚಿತ್ರವನ್ನು ತಲುಪಿಸಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ.
View this post on Instagram
’ಟಾಕ್ಸಿಕ್’ ಚಿತ್ರ ಸಿದ್ಧವಾಗಿದೆ. ಸದ್ಯ ನಾವು ಜಾಗತಿಕ ವಿತರಣೆ ಮತ್ತು ಸಹಭಾಗಿತ್ವದ ಕಾರ್ಯಗಳಲ್ಲಿ ತೊಡಗಿದ್ದೇವೆ. ಈ ಹಿನ್ನೆಲೆಯಲ್ಲಿ, ನಾವು ಚಿತ್ರದ ಬಿಡುಗಡೆಯ ಹೊಸ ಡೇಟ್ ಅನ್ನು ಶೀಘ್ರದಲ್ಲಿ ತಿಳಿಸುತ್ತೇವೆ. ಈ ಮೊದಲು ಘೋಷಿಸಿದಂತೆ ಜೂನ್ 4ರಂದು ಸಿನಿಮಾ ಬಿಡುಗಡೆಯಾಗುವುದಿಲ್ಲ. ಬದಲಾಗಿ ಜಾಗತಿಕ ಮಾರುಕಟ್ಟೆಗೆ ಪೂರಕವಾದ ದಿನಾಂಕದಂದು ವಿಶ್ವದಾದ್ಯಂತ ತೆರೆಕಾಣಲಿದೆ. ‘ಟಾಕ್ಸಿಕ್’ ಶೀಘ್ರದಲ್ಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರಲಿದೆ.

ಭಾರತೀಯ ಸಿನಿಮಾ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಚಿತ್ರವನ್ನು ಅತ್ಯಂತ ಪ್ರಭಾವಶಾಲಿಯಾಗಿ ಪ್ರೇಕ್ಷಕರ ಮುಂದೆ ತರುವುದು ನಮ್ಮ ಜವಾಬ್ದಾರಿ. ಹೀಗಾಗಿ ಬಿಡುಗಡೆಯ ದಿನಾಂಕವನ್ನು ಬದಲಿಸಿದ್ದೇವೆ. ತಾಳ್ಮೆಯಿಂದ ಕಾಯುತ್ತಿರುವ ಅಭಿಮಾನಿಗಳಿಗೆ ನಾವು ಹೆಮ್ಮೆ ಪಡುವಂತಹ ಚಿತ್ರವನ್ನು ನೀಡುತ್ತೇವೆ ಎಂದು ಯಶ್ ತಿಳಿಸಿದ್ದಾರೆ. ಇದು ಭಾರತೀಯ ಚಿತ್ರರಂಗಕ್ಕೆ ನಾನು ನೀಡುವ ಸಣ್ಣ ಕೊಡುಗೆ ಎಂದು ಭಾವಿಸುತ್ತೇನೆ.

ಯಶ್ ನಟನೆ, ನಿರ್ಮಾಣದ ಈ ಚಿತ್ರಕ್ಕೆ KVN ಸಂಸ್ಥೆ ಕೂಡ ಸಾಥ್ ಕೊಟ್ಟಿದೆ. ಯಶ್ ಜತೆ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ನಯನತಾರಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದಾರೆ.

