‘ಕಾಲವೇ ಸತ್ಯವನ್ನು ಹೊರತರುತ್ತದೆ’- Kavya Gowda ಪೋಸ್ಟ್
‘ರಾಧಾ ರಮಣ’ ಖ್ಯಾತಿಯ ನಟಿ ಕಾವ್ಯಾ ಗೌಡ (Kavya Gowda) ಅವರ ಮನೆ ಜಗಳ ಬೀದಿಗೆ ಬಂದಿದೆ. ಕಾವ್ಯಾ- ಸೋಮಶೇಖರ್ ದಂಪತಿ ಮೇಲೆ ಹಲ್ಲೆ ಹಾಗೂ ನಟಿಯ ಮೇಲೆ ರೇಪ್ ಬೆದರಿಕೆ ಬಂದ ಬೆನ್ನಲ್ಲೇ ವಾರಗಿತ್ತಿ ಪ್ರೇಮಾ, ಅವರ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.

100 ಕೋಟಿ ಮನೆಯ ಆಸ್ತಿಯ ವಿಷಯದಲ್ಲಿ ನಡೆದಿರುವ ಕಲಹ ಇದೀಗ ದೊಡ್ಡಮಟ್ಟದಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲಿ ಕಾವ್ಯಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ನಾನು ಮೌನವಾಗಿದ್ದೇನೆ ಅಂದರೆ ಭಯದಿಂದಲ್ಲ, ಕಾಲದ ಮೇಲಿನ ನಂಬಿಕೆಯಿಂದ. ಇಂದು ಅಲ್ಲದಿದ್ದರೂ ನಾಳೆ ಕಾಲವೇ ಸತ್ಯವನ್ನು ಹೊರತರುತ್ತದೆ. ಇಂದು ನನ್ನ ಮಾತು ಕೇಳಿಸದಿದ್ದರೂ, ಪರವಾಗಿಲ್ಲ. ನಾಳೆ ಕಾಲವೇ ನನ್ನ ಪರವಾಗಿ ಮಾತನಾಡುತ್ತದೆ. ನೋವು ಸಹಿಸಿಕೊಂಡೆ, ಮೌನ ಆಯ್ಕೆ ಮಾಡಿಕೊಂಡೆ ,ಕಾರಣ ಕಾಲಕ್ಕೆ ನ್ಯಾಯ ಕೊಡಲು ಸಮಯ ಬೇಕು. ಕಾಲ ಕಷ್ಟ ಕೊಟ್ಟರು ಭಯ ಇಲ್ಲ. ಇಂದು ನನ್ನ ನೋವು ರ್ಥವಾಗದಿದ್ದರೂ, ನಾಳೆ ಕಾಲವೇ ಎಲ್ಲವನ್ನು ಹೇಳುತ್ತದೆ ಮಹಾಕಾಳೇಶ್ವರನ ನನ್ನ ಜೊತೆ ಇದ್ದಾನೆ. ಓಂ ಸಾಯಿ ರಾಮ್ ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.
ಇತ್ತ ಕಾವ್ಯಾ ದಂಪತಿ ಮೇಲೆ ವಾರಗಿತ್ತಿ ಪ್ರೇಮಾ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಈ ಪ್ರಕರಣ ಕುರಿತು ತನಿಖೆಯ ಬಳಿಕ ಅಸಲಿ ವಿಚಾರ ಹೊರಬೀಳಲಿದೆ.

