ತೆಲುಗು ರಾಜ್ಯದ ಸೊಸೆಯಾಗಿದ್ರು ಕನ್ನಡ ಮರೆಯದ Rashmika Mandanna- ಕನ್ನಡ ಚಿತ್ರಕ್ಕೆ ನಟಿ ಬೆಂಬಲ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಾನು ಈ ಹಿಂದೆ ನಟಿಸಿದ್ದ ಕನ್ನಡ ನಿರ್ದೇಶಕನ ಹೊಸ ಸಿನಿಮಾಗೆ ವಿಶ್ ಮಾಡಿದ್ದಾರೆ. ರೆಡ್ ಹಾರ್ಟ್ ಇವೋಜಿ ಹಾಕಿ ಕನ್ನಡ ಸಿನಿಮಾಗೆ ರಶ್ಮಿಕಾ ಬೆಂಬಲಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ʻಮೋಡ ಕವಿದ ವಾತಾವರಣʼ ಚಿತ್ರಕ್ಕೆ ನಟಿ ವಿಶ್ ಮಾಡಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಚಮಕ್ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಿದ್ದರು. ಅಂದಿನಿಂದ ಇಂದಿನವೆರೆಗೂ ರಶ್ಮಿಕಾ ಅವರು ಸುನಿ ಜತೆ ಒಂದೊಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಸುನಿ ನಿರ್ದೇಶನದ ʻಮೋಡ ಕವಿದ ವಾತಾವರಣʼ ಚಿತ್ರಕ್ಕೆ ಶ್ರೀವಲ್ಲಿ ವಿಶ್ ಮಾಡಿದ್ದಾರೆ.
I wish you and the entire team of #modakavidavaatavarana all the bestest @SimpleSuni sir! ❤️❤️
Big love!❤️ https://t.co/mdTaI7xFRT
— Rashmika Mandanna (@iamRashmika) April 3, 2026
ಸುನೀ ಸರ್ ನಿಮಗೂ, ನಿಮ್ಮ ತಂಡಕ್ಕೂ ಶುಭಹಾರೈಕೆಗಳು. ಬಿಗ್ ಲವ್ ಎಂದು ಎರಡು ರೆಡ್ ಹಾರ್ಟ್ ಇಮೋಜಿಯನ್ನು ಹಾಕಿ ರಶ್ಮಿಕಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಿಂಪಲ್ ಸುನಿ, ತುಂಬು ಹೃದಯದ ಧನ್ಯವಾದಗಳು. ಸದಾ ಖುಷಿಯಾಗಿರಿ ಎಂದು ರಿಪ್ಲೈ ಮಾಡಿದ್ದಾರೆ. ರಶ್ಮಿಕಾಗೆ ಇಂದಿಗೂ ಕನ್ನಡದ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ ಎಂಬುದು ಸಬೀತಾಗಿದೆ. ಕನ್ನಡ ಸಿನಿಮಾಗೆ ರಶ್ಮಿಕಾ ಬೆಂಬಲಿಸಿರೋದನ್ನು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ತೆಲಂಗಾಣದ ಸೊಸೆಯಾಗಿದ್ರೂ ಕೂಡ ಕನ್ನಡವನ್ನ ಆಕೆ ಬಿಟ್ಟು ಕೊಡಲ್ಲ ಎಂಬುದು ಫ್ಯಾನ್ಸ್‌ಗೆ ಮನವರಿಕೆ ಆಗಿದೆ.

