ʼಡ್ರ್ಯಾಗನ್ʼ ಹೀರೋಗೆ ಶ್ರೀಲೀಲಾ ನಾಯಕಿ
ಕನ್ನಡದ ನಟಿ ಶ್ರೀಲೀಲಾಗೆ (Sreeleela) ಸೌತ್ನಲ್ಲಿ ಬೇಡಿಕೆ ಹೆಚ್ಚಾಗಿದೆ. ತಮಿಳಿನಲ್ಲಿ ಶಿವಕಾರ್ತಿಕೇಯನ್ ʻಪರಾಶಕ್ತಿ’ ಚಿತ್ರದಲ್ಲಿ ನಟಿಸಿದ ಬೆನ್ನಲ್ಲೇ ಮತ್ತೊಂದು ತಮಿಳು ಸಿನಿಮಾ ಆಫರ್ ಸಿಕ್ಕಿದೆ. ಕಾಲಿವುಡ್ನ ಹ್ಯಾಟ್ರಿಕ್ ಹೀರೋ ಪ್ರದೀಪ್ ರಂಗನಾಥನ್ಗೆ (Pradeep Ranganathan) ಶ್ರೀಲೀಲಾ ನಾಯಕಿಯಾಗಿದ್ದಾರೆ.

ಕಾಲಿವುಡ್ನಲ್ಲಿ ಶ್ರೀಲೀಲಾ ಬಿಗ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಲವ್ ಟುಡೇ, ಡ್ರ್ಯಾಗನ್, ಡ್ಯೂಡ್ (Dude) ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ಪ್ರದೀಪ್ ನಟನೆಯ ಹೊಸ ಸಿನಿಮಾಗೆ ಕನ್ನಡದ ʻಕಿಸ್’ ಬೆಡಗಿ ಜೊತೆಯಾಗಿದ್ದಾರೆ.

ಪ್ರದೀಪ್ಗೆ ಶ್ರೀಲೀಲಾ ಒಬ್ಬರೇ ನಾಯಕಿಯಲ್ಲ. ಮತ್ತೋರ್ವ ನಾಯಕಿಯಾಗಿ ಮೀನಾಕ್ಷಿ ಚೌಧರಿ ಕೂಡ ಸೆಲೆಕ್ಟ್ ಆಗಿದ್ದಾರೆ. ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರದೀಪ್ ಬರಲಿದ್ದಾರೆ. ಅದಷ್ಟೇ ಅಲ್ಲ, ಕನ್ನಡತಿ ಶ್ರೀಲೀಲಾಗೆ ಈ ಚಿತ್ರದಲ್ಲಿ ಉತ್ತಮ ಪಾತ್ರವೇ ಸಿಕ್ಕಿದೆ. ಈ ಮೂಲಕ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

