ಅದೃಷ್ಟ ಬದಲಿಸಿದ BBK 12- ಮಲ್ಲಮ್ಮಗೆ ಸಿಕ್ತು ಬಿಗ್ ಚಾನ್ಸ್
ಮುಗ್ಧ ಮಾತಿನ ಮೂಲಕ ‘ಬಿಗ್ ಬಾಸ್’ ಶೋನಿಂದ (Bigg Boss Kannada 12) ಮನಗೆದ್ದ ಮಲ್ಲಮ್ಮಗೆ (Mallamma) ಬಿಗ್ ಚಾನ್ಸ್ವೊಂದು ಸಿಕ್ಕಿದೆ. ಸಿನಿಮಾದಲ್ಲಿ ನಟಿಸಲು ಮಲ್ಲಮ್ಮಗೆ ಅವಕಾಶ ಸಿಕ್ಕಿದೆ.

‘ವಿನಾಶ ಕಾಲೆ’ ಸಿನಿಮಾದಲ್ಲಿ ನಟಿಸಲು ಮಲ್ಲಮ್ಮಗೆ ಚಾನ್ಸ್ ಸಿಕ್ಕಿದೆ. ತಾಯಿ ಪಾತ್ರಕ್ಕೆ ಬಣ್ಣ ಹಚ್ಚಲು ಬುಲಾವ್ ಬಂದಿದೆ. ಪಾತ್ರಕ್ಕಿರುವ ಮಹತ್ವ ನೋಡಿ ಖುಷಿಯಿಂದಲೇ ಚಿತ್ರದಲ್ಲಿ ನಟಿಸಲು ಮಲ್ಲಮ್ಮ ಒಪ್ಪಿಕೊಂಡಿದ್ದಾರೆ. ಇದಲ್ಲದೇ 2-3 ಸೀರಿಯಲ್ನಲ್ಲಿ ನಟಿಸಲು ಅವರಿಗೆ ಚಾನ್ಸ್ ಸಿಕ್ಕಿದೆಯಂತೆ. ಈ ಬಗ್ಗೆ ಯೋಚಿಸಿ ಮುಂದುವರೆಯುತ್ತೇನೆ ಎಂದು ಮಾತನಾಡಿದ್ದಾರೆ.

ಮಾತಿನ ಮಲ್ಲಿ ಮಲ್ಲಮ್ಮ ‘ಬಿಗ್ ಬಾಸ್ ಕನ್ನಡ 12’ರಲ್ಲಿ ಸ್ಪರ್ಧಿಯಾಗಿ ರಂಜಿಸಿದ್ದರು. ಇದೀಗ ಅವರ ಜನಪ್ರಿಯತೆ ಹೆಚ್ಚಾಗಿದೆ.

