ಫೀಮೇಲ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಸೀರಿಯಲ್‌ನತ್ತ ಚಾಕೋಲೇಟ್ ಹೀರೋ ಸೂರಜ್ ಸಿಂಗ್

ಫೀಮೇಲ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ಸೀರಿಯಲ್‌ನತ್ತ ಚಾಕೋಲೇಟ್ ಹೀರೋ ಸೂರಜ್ ಸಿಂಗ್

ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ 12’ಕ್ಕೆ (Bigg Boss Kannada) ತೆರೆ ಬೀಳಲು ಕೌಂಟ್ ಡೌನ್ ಶುರುವಾಗಿದೆ. ಈ ಶೋ ಮೂಲಕ ಪರಿಚಿತರಾಗಿದ್ದ ವೈಲ್ಡ್ ಕಾರ್ಡ್ ಎಂಟ್ರಿ ಸೂರಜ್ ಸಿಂಗ್ (Suraj Singh) ಇದೀಗ ಬಣ್ಣದ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ʻಪವಿತ್ರ ಬಂಧನ’ ಎಂಬ ಹೊಸ ಸೀರಿಯಲ್‌ಗೆ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ.

 

View this post on Instagram

 

A post shared by Suraj Singh (@surajsinghh_96)


ʻಬಿಗ್ ಬಾಸ್ ಕನ್ನಡ 12’ರ ಶೋಗೆ ಬರುವ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದವರು. ಆಗ ಅವರಿಗೆ ಇನ್ಸ್ಟಾಗ್ರಾಂನಲ್ಲಿ 18000 ಫಾಲೋವರ್ಸ್ ಹೊಂದಿದ್ದರು. ಇದೀಗ ಅವರಿಗೆ 3,55,000 ಜನ ಫಾಲೋವರ್ಸ್ ಇದ್ದಾರೆ. ಅಷ್ಟರ ಮಟ್ಟಿಗೆ ಸೂರಜ್ ಮೇಲಿನ ಕ್ರೇಜ್ ಹೆಚ್ಚಾಗಿದೆ.

ಅದರಲ್ಲೂ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿ ಸ್ವಿಮಿಂಗ್ ಪೂಲ್‌ನಿಂದ ಸಖತ್ ಹಾಟ್ ಆಗಿ ಎಂಟ್ರಿ ಕೊಟ್ಟರು. ಅಲ್ಲಿಂದ ಶುರುವಾದ ಸೂರಜ್ ಮೇಲಿನ ಕ್ರೇಜ್, ಈಗ ಅವರನ್ನು ನಟನಾಗಿ ಮಾಡಿದೆ. ಮತ್ತೆ ವಾಹಿನಿ ಕಡೆಯಿಂದ ಸೂರಜ್‌ಗೆ ಬಂಪರ್ ಆಫರ್ ಸಿಕ್ಕಿದೆ.

ನಟಿ ಅಮೂಲ್ಯ ಜೊತೆ ʻಪವಿತ್ರ ಬಂಧನ’ ಕಥೆ ಹೇಳೋಕೆ ಸೂರಜ್ ಸಿಂಗ್ ರೆಡಿಯಾಗಿದ್ದಾರೆ. ಪ್ರೋಮೋ ಕೂಡ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ನೆಚ್ಚಿನ ಸ್ಪರ್ಧಿ ಸೂರಜ್‌ರನ್ನು ಸೀರಿಯಲ್ ಮೂಲಕ ಕಣ್ತುಂಬಿಕೊಳ್ಳೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

News Desk Sandalwood Times

error: Content is protected !!