ಕಾವ್ಯ ಜೊತೆ ಗಿಲ್ಲಿ ಮದುವೆ- BBK12ರ ವಿನ್ನರ್ ಹೇಳೋದೇನು?

ಕಾವ್ಯ ಜೊತೆ ಗಿಲ್ಲಿ ಮದುವೆ- BBK12ರ ವಿನ್ನರ್ ಹೇಳೋದೇನು?

‘ಬಿಗ್ ಬಾಸ್ ಕನ್ನಡ 12’ರ (Bigg Boss Kannada 12) ಆಟಕ್ಕೆ ಬ್ರೇಕ್ ಬಿದ್ದಿದೆ. ದೊಡ್ಮನೆಯ ಆಟದಲ್ಲಿ ಗಿಲ್ಲಿ ನಟ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಬೆನ್ನಲ್ಲೇ ಕಾವ್ಯ (Kavya Shaiva) ಜೊತೆಗಿನ ಮದುವೆ ಬಗ್ಗೆ ಗಿಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ನಾನು ಮತ್ತು ಕಾವ್ಯ ಒಳ್ಳೆಯ ಸ್ನೇಹಿತರು. ಸ್ನೇಹಿತರಾಗಿಯೇ ಇರುತ್ತೇವೆ ಎಂದು ಗಿಲ್ಲಿ ಮಾಧ್ಯಮವೊಂದರಲ್ಲಿ ರಿಯಾಕ್ಷನ್ ಕೊಟ್ಟಿದ್ದಾರೆ. ಸದ್ಯಕ್ಕೆ ಮದುವೆ ಬಗ್ಗೆ ತಮಗೆ ಆಲೋಚನೆ ಇಲ್ಲ ಎಂದಿದ್ದಾರೆ. ಈ ಮೂಲಕ ಕಾವ್ಯ ಜೊತೆಗಿನ ಮದುವೆ ವದಂತಿಗೆ ನಟ ಬ್ರೇಕ್ ಹಾಕಿದ್ದಾರೆ.

ಇನ್ನೂ ವಿನ್ನರ್ ಗಿಲ್ಲಿ ನಟಗೆ ಬಿಗ್ ಬಾಸ್ ಕಡೆಯಿಂದ ಒಟ್ಟು 50 ಲಕ್ಷ ರೂಪಾಯಿ ಸಿಗಲಿದೆ. ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಗಿಲ್ಲಿ ಗೆದ್ದರೆ ಶರವಣ 20 ಲಕ್ಷ ನೀಡೋದಾಗಿ ಘೋಷಿಸಿದ್ದಾರೆ. ಜೊತೆಗೆ 20 ಲಕ್ಷ ಮೌಲ್ಯದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಕೂಡ ಅವರಿಗೆ ಸಿಗಲಿದೆ.

50 ಲಕ್ಷ ರೂಪಾಯಿ ಚೆಕ್ ಪಡೆದಿರುವ ಗಿಲ್ಲಿಗೆ, ಅಷ್ಟೂ ಮೊತ್ತ ಸಿಗೋದಿಲ್ಲ. ಅದರಲ್ಲಿ ಅಲ್ಪ ಹಣ ತೆರಿಗೆಗೆ ಕಟ್ ಆಗಲಿದೆ. ಒಟ್ಟು ಹಣದಲ್ಲಿ 30% ಟ್ಯಾಕ್ಸ್ ರೂಪದಲ್ಲಿ ಸರ್ಕಾರಕ್ಕೆ ಸೇರಲಿದೆ. 15 ಲಕ್ಷ ರೂ. ನೇರ ತೆರಿಗೆ ಮತ್ತು ತೆರಿಗೆ ಮೊತ್ತದ ಮೇಲೆ 4% ರಷ್ಟು ಆರೋಗ್ಯ ಮತ್ತು ಶಿಕ್ಷಣ ಸೆಸ್‌ಗೆ ಎಂದು 60 ಸಾವಿರದಂತೆ ಒಟ್ಟು 15.6 ರಷ್ಟು ತೆರಿಗೆಯಾಗಿ ಹೋಗಲಿದೆ. ಎಲ್ಲಾ ತೆರಿಗೆ ಕಡಿತದ ನಂತರ 50 ಲಕ್ಷ ರೂ.ನಲ್ಲಿ ಗಿಲ್ಲಿಗೆ 34 ಲಕ್ಷದ 40 ಸಾವಿರ ರೂ. ಮಾತ್ರ ಕೈಗೆ ಸಿಗಲಿದೆ.

News Desk Sandalwood Times

error: Content is protected !!