BBK 12: ಫಿನಾಲೆಗೆ ಕೌಂಟ್ಡೌನ್- ‘ಬಿಗ್ ಬಾಸ್’ ಗೆಲ್ಲೋ ಆ ಸ್ಪರ್ಧಿ ಯಾರು?
ಕಿರುತೆರೆಯ ಬಿಗ್ ಶೋ ‘ಬಿಗ್ ಬಾಸ್ ಕನ್ನಡ 12’ರ (Bigg Boss Kannada 12) ಆಟಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯ ಬೀಳಲಿದೆ. ಸದ್ಯ ದೊಡ್ಮನೆ ಆಟದಲ್ಲಿ 6 ಸ್ಪರ್ಧಿಗಳ ನಡುವೆ ಸೆಣಸಾಟ ನಡೆಯುತ್ತಿದೆ. ಇದರ ನಡುವೆ ಬಿಗ್ ಬಾಸ್ ಟ್ರೋಫಿ ಯಾರ ಪಾಲಾಗಲಿದೆ ಎಂದು ಪ್ರೇಕ್ಷಕರು ಕುತೂಹಲದಿಂದ ಕಾಯ್ತಿದ್ದಾರೆ.
View this post on Instagram
ದೊಡ್ಮನೆಯಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ (Rakshita Shetty), ರಘು, ಅಶ್ವಿನಿ ಗೌಡ (Ashwini Gowda), ಧ್ರುವಂತ್, ಧನುಷ್ ಗೌಡ (Dhanush Gowda), ಕಾವ್ಯ ಶೈವಾ (Kavya Shaiva) ನಡುವೆ ಪೈಪೋಟಿ ನಡೆಯುತ್ತಿದೆ. ಈ 7 ಜನ ಸ್ಪರ್ಧಿಗಳು ಪ್ರಬಲ ಆಟಗಾರರೇ ಹಾಗಾಗಿ ಪ್ರೇಕ್ಷಕರಲ್ಲಿ ವಿನ್ನರ್ ಬಗ್ಗೆ ಕುತೂಹಲ ಮೂಡಿದೆ.
View this post on Instagram
ಈ ವಾರದ ಮಧ್ಯೆ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಆ ನಂತರ ಜ.17. ಮತ್ತು 18ರಂದು `ಬಿಗ್ ಬಾಸ್’ ಕನ್ನಡ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಬಿಗ್ ಬಾಸ್ ವಿನ್ನರ್ ಯಾರು ಎಂಬ ಪ್ರಶ್ನೆಗೆ ಈ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.

