ಗೋಲ್ಡನ್ ಸ್ಟಾರ್ ಗಣೇಶ್ ಬಣ್ಣದ ಬದುಕಿಗೆ 20ರ ಸಂಭ್ರಮ
ಗೋಲ್ಡನ್ ಸ್ಟಾರ್ ಗಣೇಶ್ ಅವರು (Golden Star Ganesh) ನಟನಾಗಿ ಚೆಲ್ಲಾಟದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು 21 ವರ್ಷಗಳಾಗಿವೆ. ಅವರ ಬಣ್ಣದ ಬದುಕಿಗೆ 20 ವರ್ಷ ತುಂಬಿದ ಹಿನ್ನೆಲೆ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

ನಟನಾಗಿ ಕನ್ನಡಿಗರ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ನಾಯಕರಾಗಿ ನಟಿಸಿದ್ದ ಮೊದಲ ಚಿತ್ರ “ಚೆಲ್ಲಾಟ” ಬಿಡುಗಡೆಯಾಗಿ ಏಪ್ರಿಲ್ 21ಕ್ಕೆ ಇಪ್ಪತ್ತು ವರ್ಷಗಳಾಗಿದೆ. ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಮೂಲಕ ಗಣೇಶ್ ಅವರು ನಾಯಕರಾಗಿ ಚಿತ್ರರಂಗ ಪ್ರವೇಶಿಸಿ ಇಪ್ಪತ್ತು ವರ್ಷಗಳಾಗಿದೆ.

ಅದೇ ವರ್ಷ ಗಣೇಶ್ ಅಭಿನಯದ ಕನ್ನಡದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ʻಮುಂಗಾರು ಮಳೆʼ ಸಹ ಬಿಡುಗಡೆಯಾಗಿ, ಭರ್ಜರಿ ಯಶಸ್ಸು ಕಂಡಿತ್ತು. ಆನಂತರ ʻಗಾಳಿಪಟʼ, ʻಚೆಲುವಿನ ಚಿತ್ತಾರʼ, ʻಕೃಷ್ಣʼದಿಂದ ಹಿಡಿದು ಇತ್ತೀಚೆಗೆ ತೆರೆಕಂಡ ʻಕೃಷ್ಣಂ ಪ್ರಣಯ ಸಖಿʼವರೆಗೂ ಸಾಕಷ್ಟು ಹಿಟ್ ಚಿತ್ರಗಳ ಮೂಲಕ ಅಭಿಮಾನಿಗಳನ್ನು ಗಣೇಶ್ ತಮ್ಮ ಅಮೋಘ ಅಭಿನಯದಿಂದ ರಂಜಿಸಿದ್ದಾರೆ. ಗಣೇಶ್ ನಾಯಕರಾಗಿ 20 ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮೆಚ್ಚಿನ ನಾಯಕನಿಗೆ ವಿಶೇಷ ಅಭಿನಂದನೆಗಳನ್ನು ತಿಳಿಸಿದ್ದಾರೆ.

