ಶಾಹಿದ್‌, ಕೃತಿ‌ ಸನೋನ್ ಜತೆ ರಶ್ಮಿಕಾ ಮಂದಣ್ಣ ಬೋಲ್ಡ್‌ ಡ್ಯಾನ್ಸ್- Cocktail 2 ಫಸ್ಟ್‌ ಸಾಂಗ್‌ ಔಟ್

ಶಾಹಿದ್‌, ಕೃತಿ‌ ಸನೋನ್ ಜತೆ ರಶ್ಮಿಕಾ ಮಂದಣ್ಣ ಬೋಲ್ಡ್‌ ಡ್ಯಾನ್ಸ್- Cocktail 2 ಫಸ್ಟ್‌ ಸಾಂಗ್‌ ಔಟ್

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಬಳಿಕ ಗುಡ್‌ ನ್ಯೂಸ್‌ವೊಂದನ್ನು ಕೊಟ್ಟಿದ್ದಾರೆ. ರಶ್ಮಿಕಾ ನಟನೆಯ ಬಾಲಿವುಡ್‌ನ ʻಕಾಕ್‌ಟೈಲ್‌ 2ʼ ಸಿನಿಮಾದ ಸಾಂಗ್‌ ರಿಲೀಸ್‌ ಆಗಿದೆ.

ರಶ್ಮಿಕಾ, ಕೃತಿ ಸನೋನ್‌ (Kriti Sanon), ಶಾಹಿದ್‌ ಕಪೂರ್‌ (Shahid Kapoor) ನಟನೆಯ ʻಕಾಕ್‌ಟೈಲ್‌ 2ʼ (Cocktail 2) ಚಿತ್ರದ ಪಾರ್ಟಿ ಸಾಂಗ್‌ ರಿಲೀಸ್‌ ಆಗಿದೆ. ಸಖತ್‌ ಬೋಲ್ಡ್‌ & ಬ್ಯೂಟಿಫುಲ್‌ ರಶ್ಮಿಕಾ ಕಾಣಿಸಿಕೊಂಡಿದ್ದು, ಬಿಟೌನ್‌ ಸ್ಟಾರ್‌ಗಳ ಜತೆ ಹೆಜ್ಜೆ ಹಾಕಿದ್ದಾರೆ. ಜಬ್‌ ತಲಕ್‌ ಎಂದು ಮಸ್ತ್‌ ಆಗಿ ಕುಣಿದಿದ್ದಾರೆ.

ಕಾಕ್ಟೇಲ್ 2 ಚಿತ್ರ ಮಾಡ್ರನ್ ಆಗಿದೆ. ಇಂದಿನ ಯುವಕ ಮತ್ತು ಯುವತಿಯರ ರಿಲೇಷನ್ ಹೇಗಿರುತ್ತವೆ ಅನ್ನೋದನ್ನು ಈ ಸಿನಿಮಾ ಹೇಳುತ್ತವೆ.‌ ಅದರಲ್ಲೂ ಕೃತಿ- ರಶ್ಮಿಕಾ ಪಾತ್ರ ಭಿನ್ನವಾಗಿದೆ. ಇಬ್ಬರೂ ಲೆಸ್ಬಿಯನ್‌ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶಾಹಿದ್‌ಗೆ ಈ ನಾಯಕಿಯರು ಜೋಡಿ ಎಂದುಕೊಂಡವರಿಗೆ ನಿರ್ದೇಶಕರು ಇಲ್ಲಿ ಟ್ವಿಸ್ಟ್‌ ಕೊಟ್ಟಿದ್ದಾರೆ. ಎಲ್ಲಾ ಕುತೂಹಲಕ್ಕೂ ಚಿತ್ರದ ರಿಲೀಸ್‌ ಬಳಿಕ ಉತ್ತರ ಸಿಗಲಿದೆ.

ಕಾಕ್ಟೇಲ್ 2 ಚಿತ್ರ ಇದೇ ವರ್ಷ ರಿಲೀಸ್ ಆಗುತ್ತಿದೆ. ಜೂನ್ 19,2026 ರಂದು ರಿಲೀಸ್ ಆಗುತ್ತಿದೆ. ಡೈರೆಕ್ಟರ್ ಹೋಮಿ ಅದಜಾನಿಯಾ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಒಟ್ನಲ್ಲಿ ಶ್ರೀವಲ್ಲಿ ಹಾಟ್‌ ಅವತಾರಕ್ಕೆ ಪಡ್ಡೆಹುಡುಗರ ನಿದ್ದೆ ಕದ್ದಿರೋದಂತೂ ಗ್ಯಾರಂಟಿ.

News Desk Sandalwood Times

error: Content is protected !!