Rashmika ಜೊತೆ ಹಸೆಮಣೆ ಏರಿದ ‘ಸು ಫ್ರಮ್ ಸೋʼ ಡೈರೆಕ್ಟರ್
ʻಸು ಫ್ರಮ್ ಸೋʼ ಚಿತ್ರದ ನಿರ್ದೇಶಕ ಜೆಪಿ ತುಮಿನಾಡು (Jp Tuminad) ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಶ್ಮಿಕಾ (Rashmika) ಜೊತೆ ಅದ್ಧೂರಿಯಾಗಿ ನಿರ್ದೇಶಕ ಮದುವೆಯಾಗಿದ್ದಾರೆ. ಮದುವೆಯ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.
ʻಸು ಫ್ರಮ್ ಸೋʼ ಈ (Su From So) ಚಿತ್ರದ ಬಿಗ್ ಸಕ್ಸಸ್ ಬಳಿಕ ಜೆಪಿ ತುಮಿನಾಡು ಗ್ಯಾಪ್ ತೆಗೆದುಕೊಂಡಿದ್ರು. ಮುಂದಿನ ಚಿತ್ರಕ್ಕೆ ತಯಾರಿ ಮಾಡಿಕೊಳ್ತಿದ್ರು. ಇದರ ನಡುವೆ ಸದ್ದಿಲ್ಲದೇ ನಿರ್ದೇಶಕರು ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳತಿ ರಶ್ಮಿಕಾ ಜತೆ ಜೆಪಿ ತುಮಿನಾಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆ ಬಗ್ಗೆ ಸುಳಿವೇ ನೀಡದೇ ನಿರ್ದೇಶಕ ಹಸೆಮಣೆ ಏರಿರೋದು ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದೆ.

ಕಳೆದ 14 ವರ್ಷಗಳಿಂದ ರಂಗಭೂಮಿಯಲ್ಲಿ ಅವರು ಸಕ್ರೀಯರಾಗಿದ್ದಾರೆ. ತುಳು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಕನ್ನಡ ಸಿನಿಮಾಗಳಲ್ಲೂ ತೆರೆಹಿಂದೆ ಕೆಲಸ ಮಾಡಿ ಪಳಗಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸಕ್ಸಸ್ ಕಂಡಿದ್ದಾರೆ.

