ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡು ಗುಡ್ ನ್ಯೂಸ್ ಕೊಟ್ಟ ʻಗಂಧದಗುಡಿ’ ನಟಿ ಸಂಜನಾ
ʻಗಂಧದಗುಡಿ’ ಸೀರಿಯಲ್ ಮೂಲಕ ಮನೆ ಮಾತಾಗಿರೋ ಚಂದನಾ ಅಲಿಯಾಸ್ ಸಂಜನಾ ಬುರ್ಲಿ ಅವರು ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮನಮೆಚ್ಚಿದ ಹುಡುಗನೊಂದಿಗೆ ನಟಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಗುಡ್ ನ್ಯೂಸ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟಿ ಅಪ್ಡೇಟ್ ಹಂಚಿಕೊಂಡಿದ್ದಾರೆ.

ಭಾವಿ ಪತಿ ಸಮರ್ಥ್ ಜೊತೆಗಿನ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡು, ನಮ್ಮ ಜೀವನದ ಹೊಸ ಹೆಜ್ಜೆಗೆ ನನ್ನ ಎಲ್ಲಾ ಅಭಿಮಾನಿಗಳು ಮತ್ತು ಫಾಲೋವರ್ಸ್ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೋರುತ್ತೇನೆ ಎಂದು ಸಂಜನಾ ಬರೆದುಕೊಂಡಿದ್ದಾರೆ.
View this post on Instagram
ಮೆಡಿಕಲ್ ಓದುತ್ತಿರೋ ಸಮರ್ಥ್ ಚೆನ್ನಗಿರಿ ಜೊತೆ ನಟಿಯ ನಿಶ್ಚಿತಾರ್ಥ ನಡೆದಿದೆ. ವರ್ಷ ಮಾರ್ಚ್ನಲ್ಲಿ ನಟಿಯ ಮದುವೆ ಜರುಗಲಿದೆ.

ಪ್ರಸ್ತುತ ʻಗಂಧದಗುಡಿ’ ಸೀರಿಯಲ್ನಲ್ಲಿ ನಾಯಕಿಯಾಗಿ ನಟಿಸ್ತಿರೋ ಸಂಜನಾ, ದಿಢೀರ್ ಅಂತ ಎಂಗೇಜ್ ಆಗಿರೋ ಬಗ್ಗೆ ಅಪ್ಡೇಟ್ ಕೊಟ್ಟಿದ್ದಕ್ಕೆ ಶಾಕ್ ಆಗಿದ್ದಾರೆ. ಜೊತೆಗೆ ನೆಚ್ಚಿನ ನಟಿಗೆ ವಿಶ್ಸ್ ತಿಳಿಸುತ್ತಿದ್ದಾರೆ.

