Cocktail 2 ಕಥೆಯಲ್ಲಿ ಟ್ವಿಸ್ಟ್‌- ಲೆಸ್ಬಿಯನ್‌ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

Cocktail 2 ಕಥೆಯಲ್ಲಿ ಟ್ವಿಸ್ಟ್‌- ಲೆಸ್ಬಿಯನ್‌ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿಜಯ್‌ ದೇವರಕೊಂಡ (Vijay Devarakonda) ಜೊತೆಗಿನ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ನಟಿಸಿರುವ ‘ಕಾಕ್ಟೈಲ್‌ 2’ (Cocktail 2) ಚಿತ್ರದ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಈ ಚಿತ್ರದಲ್ಲಿ ನಾಯಕ ಶಾಹಿದ್‌ ಕಪೂರ್‌ಗೆ ರಶ್ಮಿಕಾ ನಾಯಕಿ ಎಂದೂ ಎಲ್ಲರೂ ಭಾವಿಸಿದ್ದರು. ಆದರೆ ಕಥೆಯಲ್ಲಿ ನಿರ್ದೇಶಕರು ಸೂಪರ್‌ ಟ್ವಿಸ್ಟ್‌ವೊಂದನ್ನು ಕೊಟ್ಟಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.


ಬಾಲಿವುಡ್‌ನ ಪದ್ಧತಿಗೆ ತಕ್ಕಂತೆ ನಟಿ ರಶ್ಮಿಕಾ ಮಂದಣ್ಣ ಬದಲಾಗ್ತಿದ್ದಾರೆ. ಪಕ್ಕದ ಮನೆ ಹುಡುಗಿಯಂತಿದ್ದ ಕೊಡಗಿನ ಕುವರಿ ಈಗ ಸಿಕ್ಕಾಪಟ್ಟೆ ಹಾಟ್‌ & ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ರಶ್ಮಿಕಾ ನಟಿಸಿದ `ಥಾಮಾ’ ಸಿನಿಮಾದಲ್ಲಿ ಕೊಂಚ ಬೋಲ್ಡ್‌ ಆಗಿ ನಟಿಸಿದ್ರು. ಈಗ ಕಾಕ್ಟೈಲ್‌ 2 ಚಿತ್ರದಲ್ಲಿ ಮತ್ತಷ್ಟು ಬೋಲ್ಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ ಎನ್ನಲಾದ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

ಅದಷ್ಟೇ ಅಲ್ಲ, ಚಿತ್ರದ ಶುರುವಿನಲ್ಲಿ ಶಾಹಿದ್‌ ಕಪೂರ್‌ಗೆ (Shahid Kapoor) ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಜೋಡಿ ಎಂದು ಭಾವಿಸಿದ್ದರು. ಆದರೆ ಸೂಪರ್‌ ಟ್ವಿಸ್ಟ್‌ ಏನಂದ್ರೆ, ರಶ್ಮಿಕಾ- ಕೃತಿ ಸನೋನ್‌ಗೆ ಜೋಡಿಯಾಗಿದ್ದಾರೆ. ಲೆಸ್ಬಿಯನ್‌ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಕೃತಿ ಮತ್ತು ರಶ್ಮಿಕಾ ಲೆಸ್ಬಿಯನ್‌ ಕಪಲ್‌ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಹೊಸ ಪ್ರಯೋಗಕ್ಕೆ ರಶ್ಮಿಕಾ ಮುಂದಾಗಿದ್ದಾರೆ.

2012ರಲ್ಲಿ ರಿಲೀಸ್‌ ಆದ ‘ಕಾಕ್ಟೈಲ್‌’ ಚಿತ್ರದಲ್ಲಿ ಸೈಫ್‌ಗೆ ದೀಪಿಕಾ ಪಡುಕೋಣೆ (Deepika Padukone), ದಿಯಾನಾ ಜೋಡಿಯಾಗಿ ನಟಿಸಿದ್ರು. ಇದು ಟ್ರಯಾಂಗಲ್‌ ಲವ್‌ ಸ್ಟೋರಿಯಾಗಿತ್ತು. ಇದೇ ಥೆರೆಫಿಯನ್ನು ನಿರ್ದೇಶಕರು ಪಾರ್ಟ್‌ 2 ಕೊಟ್ಟಿದ್ದಾರೆ. ಅದರಲ್ಲಿ ಹೊಸ ತರಹ ಟ್ವಿಸ್ಟ್‌ ಕೊಟ್ಟಿದ್ದಾರೆ. ರಶ್ಮಿಕಾ ಮತ್ತು ಕೃತಿ ಸನೋನ್‌ ಜೋಡಿ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಸಿನಿಮಾ ಹೇಗೆ ಮೂಡಿ ಬಂದಿದೆ ಎಂದು ನೋಡಲು ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಚಿತ್ರದ ರಿಲೀಸ್‌ಗಾಗಿ ಕಾಯ್ತಿದ್ದಾರೆ.

News Desk Sandalwood Times

error: Content is protected !!