Sarvam Maya: ಡೆಲುಲು ಪಾತ್ರದಿಂದ ಮನಗೆದ್ದ ರಿಯಾ ಶಿಬು- ನಟಿಗೆ ಹೆಚ್ಚಾಯ್ತು ಬೇಡಿಕೆ

Sarvam Maya: ಡೆಲುಲು ಪಾತ್ರದಿಂದ ಮನಗೆದ್ದ ರಿಯಾ ಶಿಬು- ನಟಿಗೆ ಹೆಚ್ಚಾಯ್ತು ಬೇಡಿಕೆ

ಲಯಾಳಂ ನಟಿ, ನಿರ್ಮಾಪಕಿ ಆಗಿ ಗಂಡ್‌ ಹೈಕ್ಳ ಮನಕದ್ದ ಚೋರಿ ರಿಯಾ ಶಿಬು (Riya Shibu) ಸದ್ಯದ ಸೆನ್ಸೇಷನ್‌ ಬ್ಯೂಟಿ. ʻಸರ್ವಂ ಮಾಯʼ (Sarvam Maya) ಚಿತ್ರದಲ್ಲಿನ ನಟನೆಯಿಂದ ಮನೆ ಮಾತಾದ ಯುವನಟಿ. ಈಕೆಯ ಹಿನ್ನೆಲೆ ಕೇಳಿದ್ರೆ ನೀವು ನಿಜಕ್ಕೂ ಅಚ್ಚರಿಪಡ್ತೀರಾ.

 

View this post on Instagram

 

A post shared by Aju Varghese (@ajuvarghese)

ಇತ್ತೀಚೆಗೆ ತೆರೆಕಂಡ ‘ಸರ್ವಂ ಮಾಯ’ ಚಿತ್ರದಲ್ಲಿ ಕ್ಯೂಟ್‌ ದೆವ್ವ ಆಗಿ ರಿಯಾ ರಂಜಿಸಿದ್ರು. ನಿವಿನ್‌ ಪೌಲ್‌ಗೆ ನಾಯಕಿಯಾದ್ರು. ನಟಿಯಾಗಿ ಸೈ ಎನಿಸಿಕೊಂಡಿರೋ ಈ ಚೆಲುವೆ ಈಗಾಗಲೇ 4 ಚಿತ್ರಗಳಿಗೆ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮುಂಬೈಕರ್‌, ಥಗ್ಸ್‌, ಮುರಾ, ಚಿಯಾನ್‌ ವಿಕ್ರಮ್‌ ನಟನೆಯ ವೀರ ಧೀರ ಶೂರನ್‌ ಚಿತ್ರಗಳನ್ನ ನಿರ್ಮಾಣ ಮಾಡಿದ್ದು ಇದೇ ರಿಯಾ ಶಿಬು.

 

View this post on Instagram

 

A post shared by Riya Shibu (@riyashibu_)

ಯಂಗ್‌ ಪ್ರೋಡ್ಯೂಸರ್‌ ಆಗಿ ರಿಯಾ ಮಿಂಚಿದ ಬೆನ್ನಲ್ಲೇ ಈಗ ನಟಿಯಾಗಿಯೂ ಸಂಚಲನ ಮೂಡಿಸುತ್ತಿದ್ದಾರೆ. ಈ ಹಿಂದೆ ಕಪ್‌ ಅನ್ನೋ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು ಈ 22ರ ಚೆಲುವೆ.

 

View this post on Instagram

 

A post shared by Aju Varghese (@ajuvarghese)

ಇದಷ್ಟೇ ಅವರ ಹಿನ್ನೆಲೆ ಅಲ್ಲ, ಖ್ಯಾತ ನಿರ್ಮಾಪಕ ಶಿಬು ತಮೀನ್ ಅವರ ಪುತ್ರಿ ರಿಯಾ. ನಟ ಹೃಧು ಹರೂನ್‌ ಅವರು ರಿಯಾ ರವರ ಸಹೋದರ. ಅವರು ಇತ್ತೀಚೆಗೆ ಡ್ಯೂಡ್‌ ಚಿತ್ರದಲ್ಲಿ ಮಮಿತಾ ಬೈಜು ಅವರ ಪತಿಯ ಪಾತ್ರದಲ್ಲಿ ನಟಿಸಿದ್ರು. ಈ ಚಿತ್ರಕ್ಕೆ ಪ್ರದೀಪ್‌ ನಾಯಕನಾಗಿದ್ರು.

ಡೆಲುಲು ಪಾತ್ರ, ರಿಯಾ ನಟನೆ ಮೆಚ್ಚಿ ತಮಿಳು ನಟ ಸೂರ್ಯ ದಂಪತಿ ನಟಿಗೆ ಸ್ಪೆಷಲ್‌ ಗಿಫ್ಟ್‌ವೊಂದನ್ನು ಕಳುಹಿಸಿ ಮೆಚ್ಚುಗೆ ಸೂಚಿಸಿದ್ರು. ಒಟ್ನಲ್ಲಿ ಡೆಲುಲು ಪಾತ್ರದ ಮೂಲಕ ನ್ಯೂ ಕ್ರಶ್‌ ಸಿಕ್ಕಂತಾಗಿದೆ. ಹೊಸ ಸಿನಿಮಾಗಳಿಗೆ ನಟಿಗೆ ಆಫರ್‌ಗಳು ಅರಸಿ ಬರುತ್ತಿವೆ.

News Desk Sandalwood Times

error: Content is protected !!