ಈ ಸಲ ಯುದ್ಧನೇ ಬೇರೆ, ಹಠ ಬಿಡೋ ಮಾತೇ ಇಲ್ಲ- TOXIC ಟೀಸರ್ನಲ್ಲಿ ಯಶ್ ರಾಯ ರಾಕಿಂಗ್
ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷಿತ್ ‘ಟಾಕ್ಸಿಕ್’ (Toxic) ಟೀಸರ್ ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ಯಶ್ ಡಿಫರೆಂಟ್ ಗೆಟಪ್ನಲ್ಲಿ ಬಂದಿದ್ದಾರೆ. ಅದಷ್ಟೇ ಅಲ್ಲ, ಡಬಲ್ ರೋಲ್ನಲ್ಲಿ ಯಶ್ ಮಾಸ್ ಆಗಿ ಬಂದಿದ್ದಾರೆ.
ಈ ಸಲ ಯುದ್ಧನೇ ಬೇರೆ, ಹಠ ಬಿಡೋ ಮಾತೇ ಇಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಗಿವಪ್ ರಾಯ ಇಟ್ಸ್ ಓವರ್ ಎಂಬ ಡೈಲಾಗ್ ಮೂಲಕ ‘ಟಾಕ್ಸಿಕ್’ ಟೀಸರ್ ಆರಂಭವಾಗುತ್ತೆ.ಇಟ್ಸ್ ಓವರ್ ವೆನ್ ಐ ಸೇ ಇಟ್ಸ್ ಓವರ್ ಎಂದು ಹೇಳುವ ಮೂಲಕ ಯಶ್ ರಾಯ ಆಗಿ ರಾಕಿಂಗ್ ಎಂಟ್ರಿ ಕೊಡ್ತಾರೆ. ಐ ಆಮ್ ಹೋಮ್ ಡ್ಯಾಡಿ ಅಂತ ಯಶ್ ಬಾಯಲ್ಲಿ ಬಂದಿರುವ ಡೈಲಾಗ್ಸ್ ಆಗಲೇ ಅನೇಕರಿಗೆ ಕಿಕ್ ಕೊಟ್ಟಿದೆ.
View this post on Instagram
ಈ ಬಾರಿ ಹಸಿಬಿಸಿ ದೃಶ್ಯಗಳನ್ನು ಟೀಸರ್ನಲ್ಲಿ ತೋರಿಸಿಲ್ಲ. ಬದಲಾಗಿ ಯಶ್ ಡಬಲ್ ಶೇಡ್, ಮಸ್ತ್ ಡೈಲಾಗ್ ಅನ್ನೇ ಹೈಲೈಟ್ ಮಾಡಿದ್ದಾರೆ. ಕನ್ನಡ ಸೇರಿ ಒಟ್ಟು 6 ಭಾಷೆಗಳಲ್ಲಿ ಟೀಸರ್ ಮೂಡಿ ಬರುತ್ತಿದೆ. ಮಾ.19ರಂದು ಚಿತ್ರ ರಿಲೀಸ್ ಆಗ್ತಿದೆ.

ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ‘ಟಾಕ್ಸಿಕ್’ ಮೂಡಿ ಬಂದಿದ್ದು, KVN ಜೊತೆಗೂಡಿ ಯಶ್ ಕೂಡ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಮತ್ತೊಂದು ಪ್ಲಸ್ ಪಾಯಿಂಟ್ ಏನಂದ್ರೆ ನಯನತಾರಾ, ಕಿಯಾರಾ ಅಡ್ವಾಣಿ (Kiara Advani), ರುಕ್ಮಿಣಿ ವಸಂತ್, ಹುಮಾ ಖುರೇಶಿ ಅವರಂತಹ ಸ್ಟಾರ್ ನಟಿಯರಿದ್ದಾರೆ. ಫೀಮೇಲ್ ನಟಿಮಣಿಯರ ದರ್ಬಾರ್ ಕೂಡ ಜೋರಾಗಿರಲಿದೆ. ಒಟ್ನಲ್ಲಿ ರಾಯ ಆಗಿರೋ ಯಶ್ ಅವರನ್ನು ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

