ರಕ್ಷಿತ್‌ ಶೆಟ್ಟಿ ಚಾಕ್ಲೆಟ್‌ ತಿನ್ನೋ ಮಗುವಲ್ಲ- ರಶ್ಮಿಕಾ ಮದುವೆ ಬಗ್ಗೆ ಪ್ರಮೋದ್‌ ಶೆಟ್ಟಿ ರಿಯಾಕ್ಷನ್‌

ರಕ್ಷಿತ್‌ ಶೆಟ್ಟಿ ಚಾಕ್ಲೆಟ್‌ ತಿನ್ನೋ ಮಗುವಲ್ಲ- ರಶ್ಮಿಕಾ ಮದುವೆ ಬಗ್ಗೆ ಪ್ರಮೋದ್‌ ಶೆಟ್ಟಿ ರಿಯಾಕ್ಷನ್‌

ರೌಡಿ ಬಾಯ್‌ ವಿಜಯ್‌ ದೇವರಕೊಂಡ (Vijay Devarakonda) ಜೊತೆ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಫೆ.26ರಂದು ಮದುವೆ ಆಗ್ತಿದ್ದಾರೆ. ಈ ಕುರಿತು ಕಿರಿಕ್‌ ಪಾರ್ಟಿ, ಕಾಂತಾರ ನಟ ಪ್ರಮೋದ್‌ ಶೆಟ್ಟಿ ಮಾತನಾಡಿದ್ದಾರೆ. ರಶ್ಮಿಕಾ ಮದುವೆಗೆ ನನಗೆ ಆಹ್ವಾನವಿಲ್ಲ ಎಂದಿದ್ದಾರೆ.

ರಶ್ಮಿಕಾ ಮದುವೆ ಕುರಿತು ಪ್ರಮೋದ್‌ ಶೆಟ್ಟಿಗೆ ಕೇಳಲಾದ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದ್ದಾರೆ. ಆಕೆಯ ಮದುವೆ ಪತ್ರಿಕೆ ನಮಗೆ ಬಂದಿಲ್ಲ. ಬರೋದು ಇಲ್ಲ. ಇದು ಎಲ್ಲರಿಗೂ ತಿಳಿದಿರೋ ವಿಚಾರ. ಅದರಲ್ಲಿ ಹೊಸತೇನಿದೆ.

ವಿಜಯ್‌ ಜೊತೆ ಅವರ ಮದುವೆ ಅಂತ ರಕ್ಷಿತ್‌ ಶೆಟ್ಟಿಗೆ ಫೀಲಿಂಗ್‌ ಇದ್ಯಾ? ಎಂದು ಕೇಳಲಾದ ಪ್ರಶ್ನೆಗೆ ಪ್ರಮೋದ್‌ ಮಾತನಾಡಿ, ಅದೆಲ್ಲಾ ಯಾವುದೋ ಕಾಲದಲ್ಲಿ ಹೋಯ್ತು. ಅವನೇನು ಚಿಕ್ಕ ಮಗುನಾ? ಅದರಲ್ಲೇ ಕೊರಗುತ್ತಾ ಕೂರೋಕೆ. ಚಾಕ್ಲೆಟ್‌ ತಿನ್ನೋವ್ರಾ? ಅದೆಲ್ಲಾ ಮುಗಿದು ಹೋದ ಅದ್ಯಾಯ ಎಂದಿದ್ದಾರೆ.

ರಕ್ಷಿತ್‌ (Rakshit Shetty) ಸಿನಿಮಾ ಬಗ್ಗೆ ಮಾತನಾಡಿ, ಅವನು ಇರುವುದೇ ಹಾಗೇ, ಸಿನಿಮಾದಲ್ಲಿ ಸ್ವಲ್ಪ ಕಳೆದು ಹೋಗ್ತಾನೆ. ಅವನಿಗೆ ನಮಷ್ಟೆಲ್ಲ ಅರ್ಜೆಂಟ್ ಇಲ್ಲ, ನಿಧಾನವಾಗಿ ವಾಪಸ್ ಬಂದು ಆರಾಮಾಗಿ ಅವನು ಸಿನಿಮಾ ಮಾಡ್ತಾನೇ ಎಂದಿದ್ದಾರೆ. ಇತ್ತೀಚೆಗೆ ಅವನೇ ಹೇಳಿದ್ದಾನಲ್ಲ, ನೋಡ್ತೀರಿ ಫೀನಿಕ್ಸ್‌ನಂತೆ ಎದ್ದು ಬರುತ್ತಾನೆ ಎಂದು ತಮ್ಮ ಗೆಳೆಯನ ಕುರಿತು ಪ್ರಮೋದ್ ಶೆಟ್ಟಿ (Pramod Shetty) ಹೇಳಿದ್ದಾರೆ.

2016ರಲ್ಲಿ ತೆರೆಕಂಡ ‘ಕಿರಿಕ್‌ ಪಾರ್ಟಿʼ ಚಿತ್ರದಲ್ಲಿ ನಟಿಸುವಾಗ ರಕ್ಷಿತ್‌ ಮತ್ತು ರಶ್ಮಿಕಾ ಮಂದಣ್ಣ ನಡುವೆ ಪ್ರೇಮಾಂಕುರವಾಗಿತ್ತು. 2017ರಲ್ಲಿ ಕೊಡಗಿನಲ್ಲಿ ಅದ್ಧೂರಿಯಾಗಿ ಇಬ್ಬರು ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು. ಆದರೆ ಮದುವೆಯ ಮುನ್ನವೇ ಕೆಲ ವೈಯಕ್ತಿಕ ವಿಚಾರವಾಗಿ ಇಬ್ಬರೂ ಬ್ರೇಕಪ್‌ ಮಾಡಿಕೊಂಡರು. ಆ ನಂತರ ಸಿಕ್ಕಾಪಟ್ಟೆ ನಟಿ ಟ್ರೋಲ್‌ ಆದರು. ಹೀಗಾಗಿ ಸೌತ್‌, ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಾ ರಶ್ಮಿಕಾ ಸ್ಟಾರ್‌ ನಟಿಯಾದ್ರು. ಪ್ರಸ್ತುತ ವಿಜಯ್‌ ಜೊತೆ ಹಸೆಮಣೆ ಏರಲು ನಟಿ ರೆಡಿಯಾಗಿದ್ದಾರೆ.

News Desk Sandalwood Times

error: Content is protected !!