ಯಾವ ಶತ್ರುವಿಗೂ ಈ ಪರಿಸ್ಥಿತಿ ಬರಬಾರದು, ಕಾಲ ಹೀಗೆ ಇರಲ್ಲ- ದರ್ಶನ್ ಬಗ್ಗೆ ಧನ್ವೀರ್ ಮಾತು
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಸಂಬಂಧ ಜೈಲು ಪಾಲಾಗಿದ್ದಾರೆ. ಫೆ.16ರಂದು ದರ್ಶನ್ (Darshan) ಬರ್ತ್ಡೇ ಇರೋ ಹಿನ್ನೆಲೆ ಅವರನ್ನು ನೋಡಲು ಫ್ಯಾಮಿಲಿ ಸಮೇತ ಜೈಲಿಗೆ ತೆರಳಿದ್ದರು. ಈ ವೇಳೆ, ತಂದೆ- ಮಗ ಅಕ್ಕ ಪಕ್ಕ ಇದ್ದರೂ ಮಾತನಾಡಲಾಗದ ಪರಿಸ್ಥಿತಿ ಹೇಗಿತ್ತ ಎಂಬುದನ್ನು ಧನ್ವೀರ್ (Dhanveerah) ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

ದರ್ಶನ್ ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು? ಮನಸ್ಥಿತಿ ಹೇಗಿತ್ತು ಎಂದು ಧನ್ವೀರ್ ಮಾತನಾಡಿ, ಅಣ್ಣನ ಹುಟ್ಟುಹಬ್ಬದಂದು ಎಲ್ಲರಿಗೂ ಬೇಸರವಾಯ್ತ. ಇಬ್ಬರೂ ಎದುರು- ಬದರು ಇದ್ದರೂ ಮನಬಿಚ್ಚಿ ಮಾತನಾಡಲಾಗದ ನೋವಿತ್ತು. ಯಾವ ಶತ್ರವಿಗೂ ಈ ಸ್ಥಿತಿ ಬರಬಾರದು. ಕೆಲವರು ಪರ್ಸನ್ ಟಾರ್ಗೆಟ್ ಮಾಡ್ತಿದ್ದಾರೆ. ಆದರೆ ಕಾಲ ಹೀಗೆ ಇರಲ್ಲ ಎಂದಿದ್ದಾರೆ.

ಇನ್ನೂ ವಿನೀಶ್ (Vineesh) ತುಂಬಾ ಮೆಚ್ಯೂರ್ಡ್ ವ್ಯಕ್ತಿ, ಯಾವಗಲೂ ತೂಕವಾಗಿ ಮಾತಡುತ್ತಾನೆ. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ, ಯಾರೊಂದಿಗೂ ಸೇರುವುದಿಲ್ಲ. ಈಗ ಎಲ್ಲದರ ಜೊತೆಗೆ ಸಮಾಜವನ್ನು ಫೇಸ್ ಮಾಡ್ತಿದ್ದಾನೆ ಎಂದು ಸಂದರ್ಶನವೊಂದರಲ್ಲಿ ಧನ್ವೀರ್ ಓಪನ್ ಆಗಿ ಮಾತನಾಡಿದ್ದಾರೆ.

