ಕಾಡಿನ ರಾಣಿಯಾದ Radhika Pandit- ಜಲಪಾತದಲ್ಲಿ ಮಿಂದೆದ್ದ ಸಿಂಡ್ರೆಲ್ಲಾ
ನಟ ಯಶ್ (Yash) ಅವರು ಟಾಕ್ಸಿಕ್, ರಾಮಾಯಣ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಾಧಿಕಾ ಪಂಡಿತ್ (Radhika Pandit) ಅವರು ಫ್ಯಾಮಿಲಿ ಜೊತೆ ಬೇಸಿಗೆ ರಜೆ ಏಂಜಾಯ್ ಮಾಡ್ತಿದ್ದಾರೆ. ಈ ಕುರಿತ ಸುಂದರ ಟ್ರಕ್ಕಿಂಗ್ ವಿಡಿಯೋವನ್ನು ನಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಯಶ್ ದಂಪತಿಯ ಮಕ್ಕಳಿಗೆ ಬೇಸಿಗೆ ಶಾಲಾ ರಜೆ ಇರುವುದರಿಂದ ಈ ಬಿಡುವಿನ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಅವರು ಈ ಪ್ರವಾಸ ಕೈಗೊಂಡಿದ್ದಾರೆ. ಸುಡುವ ಬೇಸಿಗೆಯ ನಡುವೆಯೂ ಕಾಡಿನಲ್ಲಿ ಸುತ್ತಿರೋದು, ಮರ ಹತ್ತುವುದು & ತೊರೆಯ ಬದಿಯ ಜಾರುಬಂಡೆಗಳ ಮೇಲೆ ನಡೆಯುವುದು ಒಂದು ಅದ್ಭುತ ಅನುಭವ ಎಂದು ರಾಧಿಕಾ ಬರೆದುಕೊಂಡಿದ್ದಾರೆ.

ಮಕ್ಕಳು, ಪೋಷಕರೊಂದಿಗೆ ರಾಧಿಕಾ ಕಾಡು ಮೇಡು ಸುತ್ತೋದನ್ನು ಎಂಜಾಯ್ ಮಾಡಿದ್ದಾರೆ. ಕಾಡಿನ ಹಾದಿಯಲ್ಲಿ ಗಾಳಿಯ ಪಿಸುಮಾತು, ಎಲೆಗಳ ಶಬ್ದ ಮತ್ತು ಹಕ್ಕಿಗಳ ಚಿಲಿಪಿಲಿ ನಾದದ ನಡುವೆ ನಡೆಯುವ ಸುಖವೇ ಬೇರೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
View this post on Instagram
ಅದಷ್ಟೇ ಅಲ್ಲ, ಇತ್ತೀಚೆಗೆ ರಾಧಿಕಾ ಕೂರ್ಗ್‌ನಲ್ಲಿ ಮಕ್ಕಳೊಂದಿಗೆ ಕಾಲ ಕಳೆದಿದ್ದರು. ಈ ಬೆನ್ನಲ್ಲೇ ಗೋವಾದಲ್ಲಿರುವ ಕಾಡಿನಲ್ಲಿ ಅವರು ಕಾಲ ಕಳೆದಿದ್ದಾರೆ.

