ವಿಜಯ್‌, ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಅಧಿಕೃತ- ವೈರಲ್‌ ಆಯ್ತು ಆಮಂತ್ರಣ ಪತ್ರಿಕೆ

ವಿಜಯ್‌, ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಅಧಿಕೃತ- ವೈರಲ್‌ ಆಯ್ತು ಆಮಂತ್ರಣ ಪತ್ರಿಕೆ

ಟ ವಿಜಯ್‌ ದೇವರಕೊಂಡ (Vijay Devarakonda), ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಸುದ್ದಿ ಅಧಿಕೃತವಾಗಿದೆ. ಫೆ.26ರಂದು ಹಸೆಮಣೆ ಏರೋದು ಪಕ್ಕಾ. ಈ ಕುರಿತ ಇಬ್ಬರ ಮದುವೆ ವೆಡ್ಡಿಂಗ್‌ ಕಾರ್ಡ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಕಳೆದ ಕೆಲ ವರ್ಷಗಳಿಂದ ವಿಜಯ್‌ ಮತ್ತು ರಶ್ಮಿಕಾ ಮಂದಣ್ಣ ಅವರ ಡೇಟಿಂಗ್‌ ಸುದ್ದಿ ಕೇಳಿ ಬರುತ್ತಿತ್ತು. ಈ ಬಗ್ಗೆ ಪ್ರಶ್ನೆ ಎದುರಾದಾಗ ಇಬ್ಬರೂ ಮೌನವಾಗಿ ಇರುತ್ತಿದ್ರು. ಈಗ ಅಂತೆ ಕಂತೆಗೆಲ್ಲಾ ಬ್ರೇಕ್‌ ಬಿದ್ದಿದೆ. ʻಗೀತ ಗೋವಿಂದಂʼ ಚಿತ್ರದ ಮೂಲಕ ಪರಿಚಿತರಾದ ಈ ಜೋಡಿ ಮದುವೆಯ (Wedding) ಮುದ್ರೆ ಒತ್ತೋಕೆ ರೆಡಿಯಾಗಿದ್ದಾರೆ.

ಫೆ.26ರಂದು ವಿಜಯ್‌ ಮತ್ತು ರಶ್ಮಿಕಾ ಮಂದಣ್ಣ ಉದಯಪುರದಲ್ಲಿ ಮದುವೆಯಾಗ್ತಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ ಜರುಗಲಿದೆ. ಮಾ.4ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಈ ದಿನ ಫ್ಯಾನ್ಸ್‌ಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇತ್ತೀಚೆಗೆ ಸಿನಿಮಾ ಸುದ್ದಿಗೋಷ್ಠಿಯೊಂದರಲ್ಲಿ ತನಗೆ ಈ ಹಿಂದೆ ಬ್ರೇಕಪ್‌ ಆದಾಗ ವಿಜಯ್‌ ನನ್ನ ಪರ ನಿಂತಿದ್ದರು. ವಿಜಯ್‌ ಅವರಂತಹ ವ್ಯಕ್ತಿ ಎಲ್ಲರ ಬದುಕಿನಲ್ಲೂ ಇರಬೇಕು ಎಂದು ಮಾತನಾಡಿದ್ರು.

News Desk Sandalwood Times

error: Content is protected !!