ಮದುವೆ ಬೇಡ, ಮಕ್ಕಳು ಬೇಕು ಅಂದ್ರೇನು ತಪ್ಪು?- ನಿತ್ಯಾ ಮೆನನ್‌

ಮದುವೆ ಬೇಡ, ಮಕ್ಕಳು ಬೇಕು ಅಂದ್ರೇನು ತಪ್ಪು?- ನಿತ್ಯಾ ಮೆನನ್‌

ಭಾರತೀಯ ಚಿತ್ರರಂಗದ ಖ್ಯಾತ ನಟಿ, ಕನ್ನಡತಿ ನಿತ್ಯಾ ಮೆನನ್‌ (Nithya Menen) ಅವರು ಮದುವೆಯಾಗದೇ ಮಕ್ಕಳು (Children) ಮಾಡಿಕೊಂಡ್ರೆ ಏನು ತಪ್ಪು ಎಂದು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ಈಗ ಬದಲಾಗಿವೆ ಈಗ ಲಿವ್ ಇನ್ ಸಂಬಂಧಗಳು, ಪ್ರೇಮ ಪ್ರಕರಣಗಳು, ಮದುವೆ, ಡಿವೋಸ್‌ ಎಲ್ಲವೂ ತುಂಬಾ ಕಾಮನ್ ಆಗಿದೆ. ಇದನ್ನೇ ನಟಿ ಸಂದರ್ಶನದಲ್ಲಿ ಮಾತನಾಡಿ, ಮದುವೆ ಜೀವನದ ಒಂದು ಭಾಗ ಅಷ್ಟೇ, ಅದೇ ಜೀವನವಲ್ಲ. ನೀವು ಮಕ್ಕಳನ್ನು ಬಯಸಿದರೆ ಮದುವೆಯಾಗಬೇಕಾಗಿಲ್ಲ, ಅದು ವೈಯಕ್ತಿಕ ನಿರ್ಧಾರ ಎಂದಿದ್ದಾರೆ.

ಮದುವೆಗೂ ಮುಂಚೆ, ನಂತರ ಎನ್ನುವುದಕ್ಕಿಂತ ಮದುವೆ ಇಲ್ಲದೆಯೇ ಗರ್ಭಿಣಿ ಆಗುವುದರಲ್ಲಿ ತಪ್ಪೇನಿಲ್ಲ. IVF ತಂತ್ರಜ್ಞಾನದಿಂದ ಅನೇಕರು ಮಕ್ಕಳನ್ನು ಖುಷಿಯಿಂದ ಜೀವನ ಮಾಡ್ತಿರೋದರ ಬಗ್ಗೆಯೂ ರಿಯಾಕ್ಟ್‌ ಮಾಡಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ರಿಯಲ್‌ ಲವ್‌ ಸಿಕ್ಕರೆ, ನಿಜವಾಗಲೂ ಮದುವೆ (Wedding) ಆಗ್ತೀನಿ ಎಂದು ಮೈನಾ ನಟಿ ಹೇಳಿದ್ದಾರೆ.

ಬೆಂಗಳೂರಿನ ಈ ಬೆಡಗಿ ನಿತ್ಯಾ, ಕನ್ನಡ ಮಾತ್ರವಲ್ಲ ದಕ್ಷಿಣದ ಚಿತ್ರರಂಗದಲ್ಲಿ ಸೂಪರ್‌ ಸ್ಟಾರ್‌ ಗಳ ಜೊತೆ ನಟಿಸಿದ್ದಾರೆ. ಬಹುಭಾಷಾ ನಾಯಕಿಯಾಗಿ ಸಕ್ಸಸ್‌ ಕಂಡಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸ್ತಾರೆ.

News Desk Sandalwood Times

error: Content is protected !!