ಸಮಂತಾ ಜೊತೆ ನಟಿಸೋದ್ದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ- ದಿಗಂತ್
ದೂದ್‌ಪೇಡ ದಿಗಂತ್ (Diganth) ಅವರು ಸಮಂತಾ (Samantha) ಜೊತೆ ʻಮಾ ಇಂಟಿ ಬಂಗಾರಂʼ (Maa Enti Bangaram) ಚಿತ್ರದಲ್ಲಿ ನಟಿಸ್ತಿದ್ದಾರೆ. ಸಮಂತಾ ಜೊತೆ ನಟಿಸೋದ್ದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಸಿನಿಮಾ ಚಾನ್ಸ್ ಸಿಕ್ಕಿದ್ದರ ಬಗ್ಗೆ ನಟ ಮಾತನಾಡಿದ್ದಾರೆ.

ಸಮಂತಾ ನಿರ್ಮಾಣದ ಸಿನಿಮಾದಲ್ಲಿ ಆಫರ್ ಹೇಗೆ ಸಿಕ್ತು? ಎಂಬುದನ್ನು ದಿಗಂತ್ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ನಿರ್ದೇಶಕಿ ನಂದಿನಿ ರೆಡ್ಡಿ ಅವರು ನನ್ನ ಲೈಫು ಇಷ್ಟೇನೇ ಚಿತ್ರ ನೋಡಿದು. ನಮ್ಮ ನಿರ್ದೇಶಕ ಪವನ್, ನಂದಿನಿ ರೆಡ್ಡಿ ಫ್ರೆಂಡ್ಸ್, ಹೀಗಾಗಿ ಈ ಚಿತ್ರ ಮಾಡುವಾಗ ಸಮಂತಾಗೇ ಒಳ್ಳೆಯ ಫೇರ್ ಹುಡುಕುತ್ತಿದ್ದರು. ಆಗ ನನ್ನ ಚಿತ್ರ ನೋಡಿದ್ದನ್ನು ನೆನಪಿಟ್ಟುಕೊಂಡು ನಟಿಸಲು ಆಫರ್ ನೀಡಿದ್ರು.

ʻಮಾ ಇಂಟಿ ಬಂಗಾರಂʼ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಸಮಂತಾ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸಮಂತಾ ಜೊತೆ ನಟಿಸೋದ್ದಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಈ ಚಿತ್ರದ ನಂತರ ತೆಲುಗಿನಲ್ಲಿ ಹೆಚ್ಚೆಚ್ಚು ಆಫರ್ ಸಿಗುವ ಬಗ್ಗೆ ನಂಬಿಕೆಯಿದೆ ಎಂದಿದ್ದಾರೆ.
ಇನ್ನೂ ಸಮಂತಾ ಸೆಟ್‌ನಲ್ಲಿ ಸೂಪರ್ ಕೂಲ್ ವ್ಯಕ್ತಿ. ಅವರು ತುಂಬಾ ಹಾರ್ಡ್ ವರ್ಕಿಂಗ್, ಗುರಿ ಇಟ್ಕೋಂಡ್ರೆ ಅದನ್ನು ಸಾಧಿಸೋವರೆಗೂ ಬಿಡುವುದಿಲ್ಲ ಎಂದು ದಿಗಂತ್ ಸ್ಯಾಮ್ ಬಗ್ಗೆ ಹೊಗಳಿದ್ದಾರೆ.

