ಸಂಕ್ರಾಂತಿಯಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಚೈತ್ರಾ ಕುಂದಾಪುರ

ಸಂಕ್ರಾಂತಿಯಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಚೈತ್ರಾ ಕುಂದಾಪುರ

ʻಬಿಗ್ ಬಾಸ್ ಕನ್ನಡ 11ʼ (Bigg Boss Kannada 11) ಖ್ಯಾತಿಯ ಚೈತ್ರಾ ಕುಂದಾಪುರ (Chaithra Kundapura) ಅವರು ಸಂಕ್ರಾಂತಿಯಂದು (ಜ.15) ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅವರೀಗ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.

ಬಿಗ್ ಬಾಸ್ ಬಳಿಕ ಚೈತ್ರಾ ಅವರ ಜನಪ್ರಿಯತೆ ಹೆಚ್ಚಾಗಿದೆ. ಒಂದಲ್ಲಾ ಒಂದು ಶೋ, ಬ್ರ್ಯಾಂಡ್ ಪ್ರಚಾರಗಳ ಮೂಲಕ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಸಂಕ್ರಾಂತಿಗೆ ಹೊಸ ಹೆಜ್ಜೆ ಇಟ್ಟಿದ್ದಾರೆ. ಆಧ್ಯಾತ್ಮ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪಾಡ್‌ಕಾಸ್ಟ್ ಮಾಡೋದಾಗಿ ಹೇಳಿದ್ದಾರೆ.

ವಿವಿಧ ಕ್ಷೇತ್ರದವರನ್ನು ಕರೆಸಿ ತಮ್ಮ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿಸೋದಾಗಿ ಹೇಳಿದ್ದಾರೆ. ಈ ಮೂಲಕ ಚೈತ್ರಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.


ಕಳೆದ ವರ್ಷ ಶ್ರೀಕಾಂತ್ ಕಶ್ಯಪ್ ಜೊತೆ ಚೈತ್ರಾ ಕುಂದಾಪುರ ಹಸೆಮಣೆ ಏರಿದರು.

News Desk Sandalwood Times

error: Content is protected !!