ಈ ರೂಲ್ಸ್ ಫಾಲೋ ಮಾಡಿದ್ರೆ ದೇವರಕೊಂಡ, ರಶ್ಮಿಕಾ ಮಂದಣ್ಣ ಮದುವೆಗೆ ಎಂಟ್ರಿ
ಕನ್ನಡತಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಫೆ.26ರಂದು ವಿಜಯ್ ದೇವರಕೊಂಡ(Vijay Devarakonda) ಜೊತೆ ಹಸೆಮಣೆ ಏರುತ್ತಿದ್ದಾರೆ. ಈ ಹಿನ್ನೆಲೆ ಮದುವೆಗೆ ಬರುವವರಿಗೆ ಕೆಲವು ಸ್ಟ್ರೀಕ್ಟ್ ರೂಲ್ಸ್ ಮಾಡಲಾಗಿದೆ. ಇದನ್ನು ಪಾಲಿಸಿದ್ರೆ ಈ ಜೋಡಿಯ ಮದುವೆಗೆ ಭಾಗವಹಿಸಬಹುದು.

ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಮದುವೆಗೆ ಹಾಜರಾಗುವವರು ಮಂಟಪದ ಒಳಗೆ, ಆವರಣಕ್ಕೆ ಫೋನ್ ತರುವಂತಿಲ್ಲ. ಈ ಮೂಲಕ ಯಾವುದೇ ವಿಡಿಯೋ, ಫೋಟೋಗಳು ಲೀಕ್ ಆಗದಂತೆ, ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು, ವಿಡಿಯೋಗಳು ಕೋಲಾಹಲ ಎಬ್ಬಿಸಿದಂತೆ ತಡೆಹಿಡಿಯಲು ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ.

ಈ ಮದುವೆ ಜೋಡಿಗೆ ಅವರ ಕುಟುಂಬಸ್ಥರಿಗೆ ಖಾಸಗಿ ಸಂಗತಿಯಾಗಿದ್ದು, ಈ ರೂಲ್ಸ್ ತರಲಾಗಿದೆ. ಈ ಹಿಂದೆ ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ನಯನತಾರಾ ಮದುವೆಯಲ್ಲೂ ಹೀಗೆ ಮಾಡಲಾಗಿತ್ತು. ಈ ಪಾಲಿಸಿ ವಿಜಯ್ ಮತ್ತು ರಶ್ಮಿಕಾ ಫಾಲೋ ಮಾಡ್ತಿದ್ದಾರೆ. ಖಾಸಗಿತನ ಕಾಪಾಡಲು ಇದನ್ನು ಮಾಡುತ್ತಿದ್ದಾರೆ.

ಇನ್ನೂ ʻಗೀತ ಗೋವಿಂದಂʼ ಸೆಟ್‌ನಲ್ಲಿ (Geetha Govindam) ಪರಿಚಿತರಾದ ರಶ್ಮಿಕಾ ಮತ್ತು ವಿಜಯ್ ಸ್ನೇಹ ಮದುವೆಯ ಮುನ್ನುಡಿ ಬರೆಯಲು ಹೊರಟಿದ್ದಾರೆ. ಫೆ.26 ಉದಯಪುರದಲ್ಲಿ ಮದುವೆ, ಮಾ.4ರಂದು ಹೈದರಾಬಾದ್ ಆರತಕ್ಷತೆ ನಿಗದಿಯಾಗಿದೆ. ವಿಜಯ್ ಫ್ಯಾನ್ಸ್ ವಿಶೇಷ ವ್ಯವಸ್ಥೆ ಮಾಡಲಾಗಿದೆ.

