ರಿಷಬ್‌ ಶೆಟ್ಟಿ ನಟನೆಯ ʻಜೈ ಹನುಮಾನ್‌ʼ ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ

ರಿಷಬ್‌ ಶೆಟ್ಟಿ ನಟನೆಯ ʻಜೈ ಹನುಮಾನ್‌ʼ ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ

‘ಕಾಂತಾರ ಚಾಪ್ಟರ್‌ 1′ ಸಕ್ಸಸ್‌ (Kantara Chapter 1) ಬಳಿಕ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ (Rishab Shetty) ಅವರು ʻಜೈ ಹನುಮಾನ್‌ʼ ಚಿತ್ರಕ್ಕೆ ತಯಾರಿ ಮಾಡಿಕೊಳ್ತಿದ್ದಾರೆ. ಇದರ ನಡುವೆ ಈ ಚಿತ್ರದ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಈ ಸಿನಿಮಾಗೆ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ (Rana Daggubati) ಕೂಡ ಇರಲಿದ್ದಾರೆ ಎನ್ನಲಾದ ಸುದ್ದಿಯೊಂದು ಚರ್ಚೆಗೆ ಗ್ರಾಸವಾಗಿದೆ.

ಇದೇ ಫೆ.22ರಂದು ರಿಷಬ್‌ ನಟನೆಯ ಈ ಸಿನಿಮಾ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಜರುಗಲಿದೆ. ಮಾರ್ಚ್‌ನಲ್ಲಿ ಶೂಟಿಂಗ್‌ ಶುರು ಮಾಡಲು ತಂಡ ಪ್ಲ್ಯಾನ್‌ ಮಾಡಿದೆ. ಹೀಗಿರುವಾಗ ನಟ ರಾಣಾ ಪ್ರಮುಖ ಪಾತ್ರದಲ್ಲಿ ರಿಷಬ್‌ ಜೊತೆ ನಟಿಸಲಿದ್ದಾರೆ ಎನ್ನಲಾಗಿದೆ. ತಂಡದ ಕಡಯಿಂದ ಅಧಿಕೃತ ಮಾಹಿತಿ ಬರಬೇಕಿದೆ.

ಈ ಸಿನಿಮಾವನ್ನು ಪ್ರಶಾಂತ್‌ ವರ್ಮಾ ನಿರ್ದೇಶನ ಮಾಡಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡ್ತಿದೆ.

News Desk Sandalwood Times

error: Content is protected !!