Love Mocktail 3 ಚಿತ್ರದ ‘ಒಬ್ಬಂಟಿಯಾದೆ ನಾ’ ಲಿರಿಕಲ್ ವೀಡಿಯೋ ಸಾಂಗ್‌ ರಿಲೀಸ್

Love Mocktail 3 ಚಿತ್ರದ ‘ಒಬ್ಬಂಟಿಯಾದೆ ನಾ’ ಲಿರಿಕಲ್ ವೀಡಿಯೋ ಸಾಂಗ್‌ ರಿಲೀಸ್

ಡಾರ್ಲಿಂಗ್ ಕೃಷ್ಣ (Darling Krishna) ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿರುವ ಚಿತ್ರ ಲವ್ ಮಾಕ್ಟೇಲ್ 3. ಇತ್ತೀಚೆಗಷ್ಟೇ ತಂದೆ ಮಗಳ ಬಾಂಧವ್ಯದ ಸೆಲೆಯಂತಿದ್ದ ಈ ಸಿನಿಮಾದ ಹಾಡೊಂದು ಬಿಡುಗಡೆಗೊಂಡಿತ್ತು. ಈ ಹಿಂದಿನ ಎರಡು ಸೀಕ್ವೆಲ್‌ ಅನ್ನು ಕಣ್ತುಂಬಿಕೊಂದ್ದ ಅನೇಕರು ಟ್ರೈಲರಿಗಾಗಿ ಕಾತರರಾಗಿರುವಾಗಲೇ ಪ್ರೇಮಿಗಳ ದಿನಕ್ಕೆ ಉಡುಗೊರೆ ಎಂಬಂತೆ ʻಒಬ್ಬಂಟಿಯಾದೆ ನಾ’ ಎಂಬ ಲಿರಿಕಲ್ ವೀಡಿಯೋ ಹಾಡೊಂದನ್ನು ರಿಲೀಸ್‌ ಮಾಡಲಾಗಿದೆ.

ಈಗಾಗಲೇ ಪ್ರೇಮಿಗಳ ದಿನದ ಗುಂಗಿನಲ್ಲಿ ತೇಲಿಬಂದಂತಿರೋ ಈ ಹಾಡು ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡುತ್ತಾ, ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ʻಮಾತು ಮೌನವಾಗಿದೆ ಶೋಕ ಭಾವ ಮೂಡಿದೆʼ ಎಂಬ ಸಾಲುಗಳೊಂದಿಗೆ ಶುರುವಾಗುವ ಈ ಹಾಡನ್ನು ರಾಘವೇಂದ್ರ ಕಾಮತ್ ಬರೆದಿದ್ದಾರೆ.

ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಸ್ವತಃ ಧ್ವನಿಯಾಗಿದ್ದಾರೆ. ಕೆವಲೊಂದಷ್ಟು ಹಾಡುಗಳು ಮೆಲ್ಲಗೆ ಒಳಗಿಳಿದು, ಬಹುದಿನಗಳ ನಂತರ ಆವರಿಸಿಕೊಳ್ಳುತ್ತವೆ. ಮತ್ತೊಂದಷ್ಟು ಹಾಡುಗಳು ಕೇಳಿದಾಕ್ಷಣವೇ ಎದೆಗಿಳಿದು ಕಾಡುತ್ತವೆ. ಈ ಹಾಡು ಎರಡನೇ ಸಾಲಿಗೆ ಸೇರ್ಪಡೆಗೊಳ್ಳುವ ಗುಣ ಹೊಂದಿದೆ. ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿರುವ ಈ ಹಾಡು, ಎವರ್‌ಗ್ರೀನ್ ಪ್ರೇಮಗೀತೆಗಳ ಸಾಲಿನಲ್ಲಿ ದಾಖಲಾಗುವ ಗುಣ ಹೊಂದಿದೆ. ಇಂಥಾದ್ದೊಂದು ಅಭಿಪ್ರಾಯ ಕೇಳುಗರ ಕಡೆಯಿಂದಲೇ ಹೊಮ್ಮಿಕೊಳ್ಳುತ್ತಿದೆ.

ಡಾರ್ಲಿಂಗ್ ಕೃಷ್ಣ ಲವ್‌ಮಾಕ್ಟೇಲ್ ಸರಣಿಯ ಮೊದಲ ಆವೃತ್ತಿಯಲ್ಲಿಯೇ ಹಾಡುಗಳಿಗೆ ವಿಶೇಷ ಒತ್ತು ಕೊಟ್ಟಿದ್ದರು. ಎರಡನೇ ಆವೃತ್ತಿಯಲ್ಲಿಯೂ ಆಪರಿಪಾಠ ಮುಂದುವರೆದಿತ್ತು. ಆ ಎರಡೂ ಸರಣಿಗಳ ಗೆಲುವಿನಲ್ಲಿ ಹಾಡುಗಳ ಪಾತ್ರವೂ ಇತ್ತು. ಇದೀಗ 3ನೇ ಭಾಗದಲ್ಲಿಯೂ ಕೂಡ ಅದು ಮುಂದುವರೆದಿದೆ. ಅಂದಹಾಗೆ, ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿರುವ ಲವ್ ಮಾಕ್ಟೇಲ್ 3 ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

News Desk Sandalwood Times

error: Content is protected !!