ರುಕ್ಕುಗೆ ಲಾಟರಿ- ನಾಗಚೈತನ್ಯಗೆ ಜೋಡಿಯಾದ ʻಕಾಂತಾರʼ ಚೆಲುವೆ

ರುಕ್ಕುಗೆ ಲಾಟರಿ- ನಾಗಚೈತನ್ಯಗೆ ಜೋಡಿಯಾದ ʻಕಾಂತಾರʼ ಚೆಲುವೆ

ನ್ನಡದ ನಟಿ ರುಕ್ಮಿಣಿ ವಸಂತ್‌ (Rukmini Vasanth) ಅವರು ಸೌತ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ 1, ಟಾಕ್ಸಿಕ್‌ ಬಳಿಕ ಮತ್ತೊಂದು ಬಿಗ್‌ ಪ್ರಾಜೆಕ್ಟ್‌ ಕನ್ನಡತಿಗೆ ಒಲಿದು ಬಂದಿದೆ. ಸಮಂತಾ ಮಾಜಿ ಪತಿ ನಾಗಚೈತನ್ಯ ನಟನೆಯ ಹೊಸ ಚಿತ್ರಕ್ಕೆ ರುಕ್ಮಿಣಿ ನಾಯಕಿಯಾಗಿದ್ದಾರೆ.

ತೆಲುಗಿನ ನಟ ನಾಗಚೈತನ್ಯ (Nagachaitanya) ಮಜಿಲಿ, ಲವ್‌ಸ್ಟೋರಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರೊಂದಿಗೆ ನಟಿಸಲು ರುಕ್ಮಿಣಿ ವಸಂತ್‌ಗೆ ಬಿಗ್‌ ಆಫರ್‌ ಸಿಕ್ಕಿದೆ. ಇದೊಂದು ಅಪ್ಪಟ ಪ್ರೇಮಕಥೆ ಹೊಂದಿರುವ ಸಿನಿಮಾ ಆಗಿದೆ.

`ಬೇದೂರು ಲಂಕಾ 2012′ ಚಿತ್ರ ನಿರ್ದೇಶಿಸಿದ ಯುವ ನಿರ್ದೇಶಕನೊಬ್ಬ ಚೈತನ್ಯ, ರುಕ್ಮಿಣಿ ನಟನೆಯ ಹೊಸ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಸೌತ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಇವರ ಸಿನಿಮಾ ಬಂಡವಾಳ ಹೂಡುತ್ತಿದೆ. ಈ ಮೂಲಕ ಕಾಂತಾರ ನಟಿ ರುಕ್ಮಿಣಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

News Desk Sandalwood Times

error: Content is protected !!