Ramayana ಚಿತ್ರದ ಟೀಸರ್‌ ಔಟ್-‌ Yash ಲುಕ್‌ ಹೇಗಿದೆ ಗೊತ್ತಾ?

Ramayana ಚಿತ್ರದ ಟೀಸರ್‌ ಔಟ್-‌ Yash ಲುಕ್‌ ಹೇಗಿದೆ ಗೊತ್ತಾ?

ಣ್‌ಬೀರ್‌ ಕಪೂರ್‌ (Ranbir Kapoor), ಯಶ್‌ (Yash) ನಟನೆಯ ‘ರಾಮಾಯಣ’ ಚಿತ್ರದ (Ramayana) ಟೀಸರ್‌ ಆಗಿದೆ. ದೃಶ್ಯ ವೈಭವದಲ್ಲಿ ಮಿಂದೆದ್ದ ಹಿಂದೂ ಪುರಾಣ ಪುಣ್ಯ ಕತೆಯನ್ನು ಟೀಸರ್‌ನಲ್ಲಿ ಅದ್ಭುತವಾಗಿ ತೋರಿಸಿದ್ದಾರೆ. ರಣ್‌ಬೀರ್‌ ಜೊತೆ ಯಶ್‌ ಲುಕ್‌ ಕೂಡ ಅನಾವರಣ ಆಗಿದೆ.

ರಾಮನಾಗಿ ರಣ್‌ಬೀರ್‌ ಕಪೂರ್‌ ಜೀವ ತುಂಬಿದ್ದಾರೆ. ಈ ಪಾತ್ರಕ್ಕೆ ಸೂಕ್ತವಾಗಿ ಅವರು ಹೊಂದಿಕೆ ಆಗಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ.

ಯಶ್‌ ರಾವಣನಾಗಿ ನಟಿಸಿದ್ದಾರೆ. ರಾವಣನ ಪಾತ್ರ ಪ್ರಮುಖವಾದದ್ದು, ಹೀಗಾಗಿ ಯಶ್ ಪಾತ್ರದ ಹಿಂಬಾಗದ ಲುಕ್‌ ಅಷ್ಟೇ ರಿವೀಲ್‌ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಶ್‌ ಪಾತ್ರ ಅನಾವರಣ ಮಾಡೋ ಪ್ಲ್ಯಾನ್‌ ಚಿತ್ರತಂಡಕ್ಕೆ ಇದೆ.

ಈ ವರ್ಷ ದೀಪಾವಳಿ ಹಬ್ಬದಂದು ರಾಮಾಯಣ ಚಿತ್ರ ರಿಲೀಸ್‌ ಆಗಲಿದೆ. ಎರಡನೇ ಭಾಗ 2027ರಲ್ಲಿ ರಿಲೀಸ್‌ ಆಗಲಿದೆ. ಇನ್ನೂ ಯಶ್‌ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಕೂಡ ಸಾಥ್‌ ನೀಡಿದ್ದಾರೆ.

‘ರಾಮಾಯಣ’ ಸಿನಿಮಾದ ಟೀಸರ್‌ ದೃಶ್ಯವೈಭವ ನೋಡಿ ಫ್ಯಾನ್ಸ್‌ ಬೆರಗಾಗಿದ್ದಾರೆ. ರಿಯಲ್‌ ಎಂಬಷ್ಟರ ಮಟ್ಟಿಗೆ ಜನರಿಗೆ ಕನೆಕ್ಟ್‌ ಆಗಿದೆ. ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

News Desk Sandalwood Times

error: Content is protected !!