Nandagokula ಸೀರಿಯಲ್‌ ಮಾಧವ ಕೊಟ್ರು ಶಾಕಿಂಗ್‌ ಸುದ್ದಿ- ದಂಗಾದ ಫ್ಯಾನ್ಸ್

Nandagokula ಸೀರಿಯಲ್‌ ಮಾಧವ ಕೊಟ್ರು ಶಾಕಿಂಗ್‌ ಸುದ್ದಿ- ದಂಗಾದ ಫ್ಯಾನ್ಸ್

ನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್‌ ‘ನಂದಗೋಕುಲ’ (Nandagokula) ಸೆಟ್‌ನಿಂದ ಬಿಗ್‌ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಮಾಧವನ ಪಾತ್ರಕ್ಕೆ ಗುಡ್‌ ಬೈ ಹೇಳ್ತಿದ್ದೇನೆ ಎಂದು ನಟ ವಿಜಯ್‌ಚಂದ್ರ (Vijay Chandra) ಹೇಳಿರುವ ಪೋಸ್ಟ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಪ್ರೇಕ್ಷಕರಿಗೆ ತಲೆ ಕೆಡಿಸಿದೆ. ಈ ಮೂಲಕ ಫ್ಯಾನ್ಸ್‌ಗೆ ಮಾಧವ ಪಾತ್ರಧಾರಿ ಏಪ್ರಿಲ್‌ ಫೂಲ್‌ ಮಾಡಿದ್ದಾರೆ.

ಮಾ.31ರಂದು ಮಾಧವ (Madhava) ಪಾತ್ರಧಾರಿ ಅಲಿಯಾಸ್‌ ವಿಜಯ್‌ ಪಾತ್ರಧಾರಿ, ತಾವು ಸೀರಿಯಲ್‌ ಬಿಡೋದಾಗಿ ಪೋಸ್ಟ್‌ ಮಾಡಿದ್ದರು. ಇದು ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ಶಾಕ್‌ ಕೊಟ್ಟಿತ್ತು. ಈ ಕುರಿತು ಮತ್ತೊಂದು ಪೋಸ್ಟ್‌ವೊಂದನ್ನು ಶೇರ್‌ ಮಾಡಿ, ತಾವು ಸೀರಿಯಲ್‌ ಬಿಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ವಿಜಯ್‌ಚಂದ್ರ.

ನಾನು ನಂದಗೋಕುಲ ಧಾರಾವಾಹಿ ಬಿಡುತ್ತಿದ್ದೇನೆ ಎಂದು ನಿನ್ನೆ ಹಂಚಿಕೊಂಡ ಪೋಸ್ಟ್‌ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ಅದು ಏಪ್ರಿಲ್‌ ಫಸ್ಟ್‌ ಫ್ರಾಂಕ್‌ ಆಗಿತ್ತು. ಈ ಪೋಸ್ಟ್‌ ಇಷ್ಟು ವೈರಲ್‌ ಆಗುತ್ತೆ, ನಿಮಗೆ ಇಷ್ಟು ಬೇಸರ ತರುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ. ಆದರು ಈ ಪೋಸ್ಟ್‌ನಿಂದ ನನಗೆ ಒಂದಂತು ಗೊತ್ತಾಯಿತು. ನನ್ನ ಮೇಲೆ ನೀವು ಎಷ್ಟು ಪ್ರೀತಿ ಮತ್ತು ಕಾಳಜಿ ಇಟ್ಟಿದ್ದೀರ ಅಂತ ಅರ್ಥ ಆಯ್ತು ಎಂದು ಹೇಳಿದ್ದಾರೆ ನಟ ವಿಜಯ್‌ಚಂದ್ರ.

ನನ್ನ ಹೃದಯಕ್ಕೆ ಬಹಳ ಹತ್ತಿರ ‘ನಂದಗೋಕುಲ’. ಖಂಡಿತ ನಾನು ಧಾರಾವಾಹಿಯನ್ನ ಬಿಡುವುದಿಲ್ಲ. ನಿಮ್ಮೆಲ್ಲರ ಪ್ರೀತಿಗೆ ಥ್ಯಾಂಕ್‌ ಯೂ. ನನ್ನ ಪಾತ್ರದ ಮೇಲೆ ನಿಮ್ಮ ಪ್ರೀತಿಯ ಸುರಿಮಳೆ ಇದೇ ರೀತಿ ಮುಂದುವರೆಯಲಿ ಎಂದು ‘ನಂದಗೋಕುಲ’ ಜೊತೆಗಿನ ವಿಶೇಷ ಅನುಬಂಧವನ್ನ ಹಂಚಿಕೊಂಡಿದ್ದಾರೆ ನಟ ವಿಜಯ್‌ಚಂದ್ರ. ಮಾಧವ ಸೀರಿಯಲ್‌ ಬಿಡುತ್ತಿಲ್ಲ ಎಂದು ತಿಳಿದು ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

News Desk Sandalwood Times

error: Content is protected !!