ರಕ್ಷಿತಾ ಪ್ರೇಮ್‌ ನಿರ್ಮಾಣದ ಚೊಚ್ಚಲ ಸಿನಿಮಾಗೆ ‘ಇಡಿಯೆಟ್‌’ ಟೈಟಲ್‌‌ ಫಿಕ್ಸ್

ರಕ್ಷಿತಾ ಪ್ರೇಮ್‌ ನಿರ್ಮಾಣದ ಚೊಚ್ಚಲ ಸಿನಿಮಾಗೆ ‘ಇಡಿಯೆಟ್‌’ ಟೈಟಲ್‌‌ ಫಿಕ್ಸ್

ಕ್ರೇಜಿ ಕ್ವೀನ್‌ ರಕ್ಷಿತಾ ಪ್ರೇಮ್‌ (Rakshitha Prem) ಹುಟ್ಟುಹಬ್ಬದಂದು (ಮಾ.31) ಅವರ ಚೊಚ್ಚಲ ನಿರ್ಮಾಣದ ಚಿತ್ರದ ಟೈಟಲ್‌ ಅನ್ನು ಅನೌನ್ಸ್‌ ಮಾಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ನಟಿ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

ರಕ್ಷಿತಾ ಪ್ರೇಮ್‌ ನಿರ್ಮಾಪಕಿಯಾಗಿ ಸೆಕೆಂಡ್‌ ಇನ್ಸಿಂಗ್ಸ್‌ ಶುರು ಮಾಡಿದ್ದಾರೆ. ರಕ್ಷಿತಾ ಒಡೆತನದ ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಸಹೋದರ ರಾಣಾಗೆ ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ʼಇಡಿಯೆಟ್‌ʼ (Idiot) ಎಂಬ ಟೈಟಲ್‌ ಫಿಕ್ಸ್‌ ಮಾಡಿದ್ದಾರೆ.

ಡೈರೆಕ್ಟರ್ ಪ್ರೇಮ್ ಅವರ ಶಿಷ್ಯ ಮಂಜುನಾಥ್ ಬಿ.ಎಸ್ ನಿರ್ದೇಶನದ ರಾಣಾ (Raana) ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಇಡಿಯೆಟ್‌ ಎಂಬ ಭಿನ್ನ ಟೈಟಲ್‌ ಜತೆ ಅವರು ಬರುತ್ತಿದ್ದಾರೆ. ವಿಶೇಷ ಅಂದ್ರೆ, ರಕ್ಷಿತಾ ಪ್ರೇಮ್ ಅಭಿನಯದ ಚೊಚ್ಚಲ ತೆಲುಗು ಚಿತ್ರದ ಹೆಸರು ‘ಇಡಿಯೆಟ್’ ಇದೀಗ ಅವರೇ ನಿರ್ಮಾಣದ ಚಿತ್ರಕ್ಕೆ ಈ ಟೈಟಲ್ ಇಟ್ಟಿರೋದು ವಿಶೇಷ.

News Desk Sandalwood Times

error: Content is protected !!