ಈ ಸಲ ಯುದ್ಧನೇ ಬೇರೆ, ಹಠ ಬಿಡೋ ಮಾತೇ ಇಲ್ಲ- TOXIC ಟೀಸರ್‌ನಲ್ಲಿ ಯಶ್ ರಾಯ ರಾಕಿಂಗ್

ಈ ಸಲ ಯುದ್ಧನೇ ಬೇರೆ, ಹಠ ಬಿಡೋ ಮಾತೇ ಇಲ್ಲ- TOXIC ಟೀಸರ್‌ನಲ್ಲಿ ಯಶ್ ರಾಯ ರಾಕಿಂಗ್

ರಾಕಿಂಗ್‌ ಸ್ಟಾರ್‌ ಯಶ್‌ (Yash) ನಟನೆಯ ಬಹುನಿರೀಕ್ಷಿತ್‌ ‘ಟಾಕ್ಸಿಕ್‌’ (Toxic) ಟೀಸರ್‌ ರಿಲೀಸ್‌ ಆಗಿ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. ಯಶ್‌ ಡಿಫರೆಂಟ್‌ ಗೆಟಪ್‌ನಲ್ಲಿ ಬಂದಿದ್ದಾರೆ. ಅದಷ್ಟೇ ಅಲ್ಲ, ಡಬಲ್‌ ರೋಲ್‌ನಲ್ಲಿ ಯಶ್‌ ಮಾಸ್‌ ಆಗಿ ಬಂದಿದ್ದಾರೆ.

ಈ ಸಲ ಯುದ್ಧನೇ ಬೇರೆ, ಹಠ ಬಿಡೋ ಮಾತೇ ಇಲ್ಲ ಎಂದು ಡೈಲಾಗ್‌ ಹೊಡೆದಿದ್ದಾರೆ. ಗಿವಪ್ ರಾಯ ಇಟ್ಸ್ ಓವರ್ ಎಂಬ ಡೈಲಾಗ್ ಮೂಲಕ ‘ಟಾಕ್ಸಿಕ್’ ಟೀಸರ್‌ ಆರಂಭವಾಗುತ್ತೆ.ಇಟ್ಸ್ ಓವರ್ ವೆನ್ ಐ ಸೇ ಇಟ್ಸ್ ಓವರ್ ಎಂದು ಹೇಳುವ ಮೂಲಕ ಯಶ್‌ ರಾಯ ಆಗಿ ರಾಕಿಂಗ್ ಎಂಟ್ರಿ ಕೊಡ್ತಾರೆ. ಐ ಆಮ್ ಹೋಮ್ ಡ್ಯಾಡಿ ಅಂತ ಯಶ್‌ ಬಾಯಲ್ಲಿ ಬಂದಿರುವ ಡೈಲಾಗ್ಸ್ ಆಗಲೇ ಅನೇಕರಿಗೆ ಕಿಕ್ ಕೊಟ್ಟಿದೆ.

 

View this post on Instagram

 

A post shared by KVN Productions (@kvn.productions)

ಈ ಬಾರಿ ಹಸಿಬಿಸಿ ದೃಶ್ಯಗಳನ್ನು ಟೀಸರ್‌ನಲ್ಲಿ ತೋರಿಸಿಲ್ಲ. ಬದಲಾಗಿ ಯಶ್‌ ಡಬಲ್‌ ಶೇಡ್‌, ಮಸ್ತ್‌ ಡೈಲಾಗ್ ಅನ್ನೇ ಹೈಲೈಟ್‌ ಮಾಡಿದ್ದಾರೆ. ಕನ್ನಡ ಸೇರಿ ಒಟ್ಟು 6 ಭಾಷೆಗಳಲ್ಲಿ ಟೀಸರ್‌ ಮೂಡಿ ಬರುತ್ತಿದೆ. ಮಾ.19ರಂದು ಚಿತ್ರ ರಿಲೀಸ್‌ ಆಗ್ತಿದೆ.

ಗೀತು ಮೋಹನ್‌ದಾಸ್‌ ನಿರ್ದೇಶನದಲ್ಲಿ ‘ಟಾಕ್ಸಿಕ್‌’ ಮೂಡಿ ಬಂದಿದ್ದು, KVN ಜೊತೆಗೂಡಿ ಯಶ್‌ ಕೂಡ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಮತ್ತೊಂದು ಪ್ಲಸ್‌ ಪಾಯಿಂಟ್‌ ಏನಂದ್ರೆ ನಯನತಾರಾ, ಕಿಯಾರಾ ಅಡ್ವಾಣಿ (Kiara Advani), ರುಕ್ಮಿಣಿ ವಸಂತ್‌, ಹುಮಾ ಖುರೇಶಿ ಅವರಂತಹ ಸ್ಟಾರ್‌ ನಟಿಯರಿದ್ದಾರೆ. ಫೀಮೇಲ್‌ ನಟಿಮಣಿಯರ ದರ್ಬಾರ್‌ ಕೂಡ ಜೋರಾಗಿರಲಿದೆ. ಒಟ್ನಲ್ಲಿ ರಾಯ ಆಗಿರೋ ಯಶ್‌ ಅವರನ್ನು ನೋಡಲು ಫ್ಯಾನ್ಸ್‌ ಕಾಯ್ತಿದ್ದಾರೆ.

News Desk Sandalwood Times

error: Content is protected !!